ಬೆಂಗಳೂರು : ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕ ಎಲೆಕ್ಷನ್ ಬಜೆಟ್ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ, ಇದು ಬಹಳ ಚರ್ಚೆ ಮಾಡುವಂತಹ ಬಜೆಟ್ ಏನೂ ಅಲ್ಲ ಎಂದರು .
ಇದು ರೈತರು, ಬಡವರ ದಲಿತರ ವಿರೋಧಿ ಬಜೆಟ್. ಇದರಿಂದ ಜನರಿಗೆ ಏನೂ ಸಿಕ್ಕಿಲ್ಲ. ಇದೊಂದು ವಿಕಸಿತ ಬಜೆಟ್, 2024-25ನೇ ವರ್ಷದ ಮಧ್ಯಂತರ ಬಜೆಟ್ ಮುಗಿಸಿದ್ದಾರೆ. ಚುನಾವಣೆ ಇರೋದರಿಂದ ಪೂರ್ಣ ಬಜೆಟ್ ಘೋಷಣೆ ಆಗಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.