ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ (Interim Budget) ಮಂಡಿಸಿದ್ದಾರೆ.
ಮಧ್ಯಂತರ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು, ಸೀತಾರಾಮನ್ 2023-24ರ ಪರಿಷ್ಕೃತ ಅಂದಾಜುಗಳನ್ನು ನೀಡಿದ್ದಾರೆ.ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳ ಪರಿಷ್ಕೃತ ಅಂದಾಜು 27.56 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲಿ ತೆರಿಗೆ ಸ್ವೀಕೃತಿಗಳು 23.24 ಲಕ್ಷ ಕೋಟಿ ರೂ. ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು 44.90 ಲಕ್ಷ ಕೋಟಿ ರೂ. 30.3 ಲಕ್ಷ ಕೋಟಿ ರೂ.ಗಳ ಆದಾಯವು ಬಜೆಟ್ ಅಂದಾಜಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ವಿತ್ತೀಯ ಕೊರತೆಯ ಪರಿಷ್ಕೃತ ಅಂದಾಜು ಜಿಡಿಪಿಯ ಶೇ.5.8ರಷ್ಟಿದೆ.