ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಕಂಡು ಬರುತ್ತಿವೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿತ್ತಿವೆ. ದೇಶದ ಪ್ರತಿಯೊಂದು ವರ್ಗದ ಜನರಿಗೂ ಪ್ರತಿಯೊಂದು ಸೌಲಭ್ಯ ದೊರೆಯುತ್ತಿದ್ದು, ಗ್ರಾಮೀಣ ಜನರ ಆದಾಯ ಹೆಚ್ಚಿದೆ ಎಂದಿದ್ದಾರೆ.
ನಮ್ಮ ಯುವ ಜನತೆ ಹೆಚ್ಚಿನ ಆಕಾಂಕ್ಷೆ ಹೊಂದಿದ್ದಾರೆ. ಉಜ್ವಲ ಭವಿಷ್ಯಕ್ಕಾಗಿ ಭರವಸೆ, ನಂಬಿಕೆಗಳನ್ನು ಇಟ್ಟಿದ್ದಾರೆ. ನಮ್ಮ ಸರ್ಕಾರದ ಅತ್ಯುತ್ತಮ ಕೆಲಸಗಳಿಂದಾಗಿ ಜನರು ಮತ್ತೊಮ್ಮೆ ಜನಾದೇಶ ನೀಡುವ ಭರವಸೆ ಇದೆ ಎಂದರು.
ಬಡವರು, ಮಹಿಳೆಯರು, ಯುವಕರ ಕಡೆ ಸರ್ಕಾರ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ರೈತರ ಅಭಿವೃದ್ಧಿ ಬಗ್ಗೆ ಅದ್ಯತೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯಿಂದ ನಾಲ್ಕು ಕೋಟಿ ರೈತರಿಗೆ ಲಾಭವಾಗಿದೆ. 2047ರ ವೇಳೆಗೆ ಭರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.