ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಭೆಯಲ್ಲಿ ಬಜೆಟ್ಗೆ ಸಂಪುಟದ ಒಪ್ಪಿಗೆ ಸಿಗಲಿದೆ, ಸಭೆಯಲ್ಲಿ ಪ್ರಧಾನಿ ಮೋದಿ ಕೂಡ ಇದ್ದಾರೆ. ಸಂಪುಟ ಸಭೆ ಬಳಿಕ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
ಲೋಕಸಭಾ ಚುನಾವಣೆ 2024 ರ ನಂತರ ಹೊಸ ಸರ್ಕಾರವು ಜುಲೈನಲ್ಲಿ ಪೂರ್ಣ ಬಜೆಟ್ ಅನ್ನು ಮಂಡಿಸುವ ನಿರೀಕ್ಷೆಯಿದೆ. ಕೇಂದ್ರ ಹಣಕಾಸು ಸಚಿವರಾಗಿ ಇದು ಅವರ ಸತತ ಆರನೇ ಬಜೆಟ್ ಮಂಡನೆಯಾಗಿದೆ. ಹೊಸ ಮತ್ತು ಹಳೆಯ ತೆರಿಗೆ ಆಡಳಿತಗಳ ಅಡಿಯಲ್ಲಿ ಬಜೆಟ್ ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ 50,000 ರೂ.ಗೆ ಹೆಚ್ಚಿಸಬಹುದು ಎಂಬ ವರದಿಗಳಿವೆ.