![](https://kannadadunia.com/wp-content/uploads/2021/04/vidhana-soudha-1-800x445-1.jpg)
ಬೆಂಗಳೂರು : 2023-24 ನೇ ಸಾಲಿನಲ್ಲಿ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ ತಾಲ್ಲೂಕುಗಳೆಂದು ಕರ್ನಾಟಕ ಸರ್ಕಾರ ಘೋಷಿಸಿದ್ದು, ಏಪ್ರಿಲ್2024 ಮತ್ತು ಮೇ 2024 ಮಾಹೆಗಳ ಬೇಸಿಗೆ ರಜಾ ಅವಧಿಯಲ್ಲಿ ಪಿ.ಎಂ.ಪೋಷಣ್ -ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ನಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮಿಕ್ಷೆಯ (Ground Truthing) ವರದಿಯನ್ವಯ 2023 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ ಉಲ್ಲೇಖ (4) ರಲ್ಲಿ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲೂಗಳೆಂದು ಸರ್ಕಾರವು ಘೋಷಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಿ ಆದೇಶಿಸಿದೆ.
ಸಂಬಂಧಪಟ್ಟ ಜಿಲ್ಲೆಗಳ ಒಟ್ಟು 223 ಬರ ಪೀಡಿತವೆಂದು ಘೋಷಿಸಿರುವ ತಾಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿಗಳಲ್ಲಿ ಪ್ರಸುತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್-2024 ಮತ್ತು ಮೇ-2024ರ ಮಾಹೆಗಳ ಒಟ್ಟು 41 ದಿನಗಳ ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟವನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಈ ಸಂಬಂಧ ಈ ಕೆಳಕಂಡ ನಮೂನೆಯಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಪ್ರಸ್ತುತ ತರಗತಿವಾರು ದಾಖಲಾತಿ ಹಾಜರಾತಿಯಂತೆ ಬಿಸಿಯೂಟ ಸ್ವೀಕರಿಸಲು ಇಚ್ಚಿಸುವ/ ಅಪೇಕ್ಷೆ ಹೊಂದಿರುವ ಮಕ್ಕಳ ಸಂಖ್ಯಾ ಬಲವನ್ನು ಗುರುತಿಸುವ ಸಂಬಂಧ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಿನ ಸಹಾಯನ ನಿರ್ದೇಶಕರು ಅಗತ್ಯ ಕ್ರಮ ವಹಿಸಿ ಇನ್ನೆರಡು ಅಂದರೆ ದಿನಾಂಕ 03.02.2024 ರ ಮಧ್ಯಾಹ್ನದೊಳಗೆ ಜಿಲ್ಲಾವಾರು ಕ್ರೋಢಿಕರಿಸಿದ ಮಾಹಿತಿಯನ್ನು ಈ ಕಚೇರಿಯ m2mdmskarnataka@gmail.com ಇ-ಮೇಲ್ ವಿಳಸಕ್ಕೆ ತಪ್ಪದೇ ತುರ್ತಾಗಿ ಸಲ್ಲಿಸುವಂತೆ ಸೂಚಿಸಿದೆ.
- ಶಾಲಾ ಹಂತದಲ್ಲಿ ತರಗತಿವಾರು ಪ್ರತಿ ವಿದ್ಯಾರ್ಥಿಯಿಂದ ಬಿಸಿಯೂಟವನ್ನು ಸ್ವೀಕರಿಸುವ ಸಲುವಾಗಿ ವಿದ್ಯಾರ್ಥಿ ಮತ್ತು ಪೋಷಕರಿಂದ ಒಪ್ಪಿಗೆ ಪತ್ರವನ್ನು ಶಾಲಾ ಮುಖ್ಯೋಪಾದ್ಯಾಯರು ಪಡೆದುಕೊಳ್ಳುವುದು, ಒಪ್ಪಿಗೆ ಪತ್ರ ಆಧರಿಸಿ ಶಾಲಾ ಹಂತದಲ್ಲಿ ಬಿಸಿಯೂಟವನ್ನು ಸ್ವೀಕರಿಸುವ ಮಕ್ಕಳ ಸಂಖ್ಯಾಬಲವನ್ನು ಗುರುತಿಸಿ ನಿಗಧಿತ ನಮೂನೆಯಲ್ಲಿ ತರಗತಿವಾರು ಕ್ರೋಢೀಕರಿಸಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ಇವರಿಗೆ ಸಲ್ಲಿಸುವುದು.
- ತಾಲೂಕು ಹಂತದಲ್ಲಿ ಶಾಲಾವಾರು ಮತ್ತು ತರಗತಿವಾರು ಒಪ್ಪಿಗೆ ಸೂಚಿಸಿರುವ ಮಕ್ಕಳ ಸಂಖ್ಯಾಬಲವನ್ನು ಕ್ರೋಢೀಕರಿಸಿ, ತಾಲ್ಲೂಕುವಾರು ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ರವರು ಧೃಢೀಕರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿ, ಪಿ.ಎಂ.ಪೋಷಣ್ ಇವರಿಗೆ ದಿನಾಂಕ 02.02.2024ರಂದು ಸಂಜೆ 5.00 ಗಂಟೆ ಒಳಗಾಗಿ ತಪ್ಪದೇ ಸಲ್ಲಿಸುವುದು.
- ಜಿಲ್ಲಾವಾರು ಕ್ರೋಡಿಕರಿಸಿದ ಮಾಹಿತಿಯನ್ನು ದೃಢೀಕರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿಗಳು, ಪಿ.ಎಂ.ಪೋಷಣ್ ರವರು ದಿನಾಂಕ:03.02.2024 ರ ಮಧ್ಯಾಹ್ನ 2.00 ಗಂಟೆ ಒಳಗಾಗಿ ರಾಜ್ಯ ಕಛೇರಿಗೆ ಇ-ಮೇಲ್ ಮಾಡಿ ತಪ್ಪದೇ ಸಲ್ಲಿಸುವುದು. ಸದರಿ ಮಾಹಿತಿಯು ಅತ್ಯಂತ ಜರೂರಾಗಿರುವುದರಿಂದ ವಿಳಂಬಕ್ಕೆ ಅವಕಾಶ ಕೊಡದೇ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
![](https://kannadadunia.com/wp-content/uploads/2024/01/WhatsApp-Image-2024-01-31-at-6.16.34-PM-1.jpeg)
![](https://kannadadunia.com/wp-content/uploads/2024/01/WhatsApp-Image-2024-01-31-at-6.16.34-PM.jpeg)