![](https://kannadadunia.com/wp-content/uploads/2024/01/Accident-Baatchat.jpg)
ಬೆಂಗಳೂರು : ಅಪಘಾತ ತಡೆಗೆ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ಅಪಘಾತ ತಡೆಗೆ ಕನ್ನಡ-ಇಂಗ್ಲಿಷ್ ಭಾಷೆ ಆಧಾರಿತ ಚಾಟ್ ಬಾಟ್ ಅಭಿವೃದ್ಧಿಪಡಿಸಲಾಗಿದೆ.
ಅಪಘಾತಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಆಧಾರಿತ ‘ಚಾಟ್‌ಬಾಟ್’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಟ್ರಾಫಿಕ್ ಸಮಸ್ಯೆ ಮತ್ತು ಸಾರ್ವಜನಿಕರ ವಾಹನಗಳು ಅಪಘಾತ ನಡೆದ ಸಂದರ್ಭದಲ್ಲಿ ಅಗತ್ಯ ಮಾಹಿತಿ ಮತ್ತು ಅಪಘಾತ ನಡೆದ ಸ್ಥಳದ ಮಾಹಿತಿಯನ್ನು ಪೊಲೀಸ್ ಇಲಾಖೆ ಸಿಬ್ಬಂದಿ ಚಾಟ್‌ಬಾಟ್‌ನಿಂದ ಪಡೆಯಲಿದ್ದಾರೆ. ಜನಸಾಮಾನ್ಯರು ಇದರ ಬಳಕೆ ಮಾಡಿಕೊಂಡು ಅಪಘಾತ ನಡೆದ ವಿವರ ದಾಖಲಿಸಬಹುದಾಗಿದೆ. ಹೊಸ ತಂತ್ರಜ್ಞಾನ ಆಧಾರಿತ ಈ ಆ್ಯಪ್‌ನ್ನು ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದೆ.