ಮಂಡ್ಯ : ಮಂಡ್ಯದಲ್ಲಿ ‘ಹನುಮಾನ್ ಧ್ವಜ’ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಗೋಡು ಗ್ರಾಮ ಪಂಚಾಯಿತಿಯ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ.
ಮಂಡ್ಯದಲ್ಲಿ ‘ಹನುಮಾನ್ ಧ್ವಜ’ ವಿವಾದ ರಾಜಕೀಯ ದಂಗಲ್ ಗೆ ಕಾರಣವಾದ ಬೆನ್ನಲ್ಲೇ ಗ್ರಾಮ ಪಂಚಾಯಿತಿಯ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ. ಹೌದು, ಧ್ವಜ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಗ್ರಾಮ ಪಂಚಾಯತ್ ನಡಾವಳಿ ಪುಸ್ತಕವೇ ನಾಪತ್ತೆ ಆಗಿದೆ. ಜನವರಿ 25ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಹನುಮಧ್ವಜ ಹಾರಾಟಕ್ಕೂ ಮುನ್ನಾ, ಗ್ರಾಮ ಪಂಚಾಯ್ತಿಯ 22 ಸದಸ್ಯರಿಂದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 18 ಜನರು ಹನುಮಧ್ವಜ ಹಾರಾಟ ಸಂಬಂಧ ಒಪ್ಪಿಗೆಯನ್ನು ಸೂಚಿಸಿದ್ದಾರೆ.ಇನ್ನುಳಿದವರು ಒಪ್ಪಿಗೆ ಸೂಚಿಲ್ಲ. ಈ ಎಲ್ಲವನ್ನು ಜನವರಿ.25ರಂದು ನಡವಳಿ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು.
ಇದೀಗ ಗ್ರಾಮ ಪಂಚಾಯ್ತಿಯ ಸದಸ್ಯರ ಸಭೆಯ ನಡವಳಿಯ ನಿರ್ಣಯದ ಪುಸ್ತಕವೇ ನಾಪತ್ತೆಯಾಗಿದೆ. ಈ ಮೂಲಕ ಈಗ ಹನುಮಧ್ವಜ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.