![](https://kannadadunia.com/wp-content/uploads/2023/06/dk-shivakumar16465625671647102728.jpg)
ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಹುತೇಕ ಬಿಜೆಪಿ ಜೊತೆಗೆ ವಿಲೀನ ಆಗಿದೆ. ಕುಮಾರಸ್ವಾಮಿ ಅವರು ಯಾವ ಬಣ್ಣದ ಶಾಲು ಬೇಕಾದ್ರೂ ಹಾಕಿಕೊಳ್ಳಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುತೇಕ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನ ಆಗಿದೆ. ಕುಮಾರಸ್ವಾಮಿ ಅವರು ಕೇಸರಿ ಶಾಲುವಾದರೂ ಹಾಕಿಕೊಳ್ಳಲಿ ಏನಾದರೂ ಹಾಕಿಕೊಳ್ಳಲಿ. ಅವರು ಯಾವ ಬಣ್ಣದ ಶಾಲು ಬೇಕಾದರೂ ಹಾಕಿಕೊಳ್ಳಲಿ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಅಸ್ತಿತ್ವ ಇಲ್ಲ. ಹೀಗಾಗಿ ಬಿಜೆಪಿಯವರು ಜೆಡಿಎಸ್ ಜೊತೆಗೆ ಸೇರಿ ಹೋಗಿದ್ದಾರೆ. ಮೈಸೂರು ಭಾಗದ ಜನರು ಸಹೋದರರಂತೆ ಬದುಕುತ್ತಿದ್ದಾರೆ. ಆದರೆ ಇವರು ಅಶಾಂತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.