ಕಲಬುರಗಿ : ಬಾವಿಗೆ ಬಿದ್ದು ಅಣ್ಣ-ತಂಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾವಿಗೆ ಹಾರಿದ್ದ ತಂಗಿ ರಕ್ಷಿಸಲು ಹೋಗಿದ್ದ ಅಣ್ಣ ಕೂಡ ಮೇಲೆ ಬರಲು ಆಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ನಂದಿನಿ (18) , ಅಣ್ಣ ಸಂದೀಪ್ (21) ಎಂದು ಗುರುತಿಸಲಾಗಿದೆ. ಚೆನ್ನಾಗಿ ಓದು ಎಂದು ಅಣ್ಣ ಬುದ್ದಿವಾದ ಹೇಳಿದ್ದಕ್ಕೆ ತಂಗಿ ಮನೆ ಹತ್ತಿರದ ಬಾವಿಗೆ ಹಾರಿದ್ದಳು. ತಂಗಿ ಬಾವಿಗೆ ಬಿದ್ದಳು ಎಂದು ತಂಗಿಯನ್ನು ರಕ್ಷಿಸಲು ಹೋದ ಅಣ್ಣ ಕೂಡ ಮೃತಪಟ್ಟಿದ್ದಾರೆ.
ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.