![](https://kannadadunia.com/wp-content/uploads/2024/01/drone-prathap.png)
ಬೆಂಗಳೂರು : ಬಿಗ್ ಬಾಸ್ ಸೀಸನ್ 10 ರ ರನ್ನರ್ ಅಪ್ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಸುಳ್ಳು ಹೇಳಿ ರೈತರಿಂದ ಹಣ ಪಡೆದಿದ್ದಾರೆ ಎಂದು ದೂರು ದಾಖಲಾಗಿದೆ.
ಡ್ರೋನ್ ಪ್ರತಾಪ್ ಅವರು ಸುಳ್ಳು ಮಾಹಿತಿ ನೀಡಿ ರೈತರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಆರ್ ಆರ್ ನಗರ ಠಾಣೆಗೆ ದೂರು ನೀಡಲಾಗಿದೆ.
ಡ್ರೋನ್ ಪ್ರತಾಪ್ ಅವರು ಡ್ರೋನಾರ್ಕ್ ಏರೋಸ್ಪೇಸ್ ಪ್ರೈ.ಲಿ. ಹಾಗೂ ಕ್ಯಾಸ್ಟರ್ ಡ್ರೋನಾಟಿಕ್ಸ್ ಪ್ರೈವೇಟ್ ಲಿ. ಕಂಪನಿಗಳನ್ನು ತೆರೆದು ಸುಳ್ಳು ಮಾಹಿತಿ ನೀಡಿ ರೈತರಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.