ಪುಣೆ : ಮದುವೆಯಾಗುತ್ತೇನೆ ಎಂದು ನಂಬಿಸಿ ನಟಿಯೋರ್ವರ ಮೇಲೆ ಅತ್ಯಾಚಾರ ಎಸಗಲಾಗಿದ್ದು, ದೂರು ದಾಖಲಾಗಿದೆ.
2023 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಟಿ ಜೊತೆ ಸ್ನೇಹ ಬೆಳೆಸಿದ ವ್ಯಕ್ತಿ ಪ್ರಫೋಸ್ ಮಾಡಿದ್ದ. ನಂತರ ನಟಿ ಜೊತೆ ಸಂಬಂಧ ಬೆಳೆಸಲು ಪತ್ನಿಗೆ ಡೈವೋರ್ಸ್ ನೀಡುತ್ತೇನೆ ಎಂದು ಹೇಳಿದ್ದನು. ಮದುವೆಯ ನಿವೇದನೆ ಒಪ್ಪಿದ ಬಳಿಕ ನಟಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ನಂತರ ನಟಿ ಮದುವೆಯಾಗಲು ಒತ್ತಾಯಿಸಿದ್ದು, ಆತ ಬಂದೂಕು ತೋರಿಸಿ ಬೆದರಿಸಿದ್ದಾನೆ. ಸದ್ಯ, ಪೊಲೀಸರು ನಟಿ ಹೇಳಿಕೆ ದಾಖಲಿಸಿಕೊಂಡು ಎಫ್ ಐ ಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.