![](https://kannadadunia.com/wp-content/uploads/2018/07/yathindra1.jpg)
ಗುಂಡ್ಲುಪೇಟೆ : ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಿಂದನೆ ಮಾಡಿದ ಯುವಕನನ್ನು ಬಂಧಿಸಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಯತೀಂದ್ರ ಸಿದ್ದರಾಮಯ್ಯರನ್ನು ರಂಜಿತ್ ಎಂಬ ಯುವಕ ನಿಂದನೆ ಮಾಡಿದ್ದಾನೆ. ಕೂಡಲೇ ಪೊಲೀಸರು ಯುವಕನ್ನು ಬಂಧಿಸಿದ್ದಾರೆ.
ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡುವಾಗ ವೇದಿಕೆ ಹಿಂದೆ ನಿಂತಿದ್ದ ರಂಜಿತ್, ಯತೀಂದ್ರಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್ ಏರಿ ಪರಾರಿಯಾಗಿದ್ದ. ಕೂಡಲೇ ಸಚಿವ ಬೈರತಿ ಸುರೇಶ್ ಅವರು ಎಸ್ ಪಿ ಕರೆ ಮಾಡಿ ಯುವಕನನ್ನು ಬಂಧಿಸುವಂತೆ ಸೂಚಿಸಿದರು. ಮತ್ತೆ ವೇದಿಕೆ ಬಳಿ ಆಗಮಿಸಿದ ರಂಜಿತ್ ಗೆ ಯುವಕರು ಧರ್ಮದೇಟು ನೀಡಿದ್ದಾರೆ.