![](https://kannadadunia.com/wp-content/uploads/2024/01/elephant.jpg)
ಬೆಂಗಳೂರು : ರಾಜ್ಯ ಸರ್ಕಾರವು ಆನೆ-ಮಾನವ ಸಂಘರ್ಷ ತಪ್ಪಿಸಲು ಮಹತ್ವದ ಕ್ರಮ ಕೈಗೊಂಡಿದ್ದು, ಆನೆಗಳಿಗೆ ಕಾಡಿನಲ್ಲಿಯೇ ಮೇವು ಒದಗಿಸಲು ನಿರ್ಧರಿಸಲಾಗಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಇತ್ತೀಚೆಗೆ ಆನೆಗಳು ಆಹಾರ ಹುಡುಕಿಕೊಂಡು ನಾಡಿಗೆ ಬರಲು ಪ್ರಾರಂಭಿಸಿದೆ. ಇದರಿಂದಾಗಿ ಜನರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡಿರುವ ಸರ್ಕಾರವು, ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲಿಯೇ ಒದಗಿಸಿಕೊಡಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಆನೆಗಳಿಗೆ ಮೇವು ಹಾಗೂ ನೀರನ್ನು ಕಾಡಿನಲ್ಲಿಯೇ ಒದಗಿಸಿವುದರಿಂದ ಆನೆಗಳು ಕಾಡಿನಿಂದ ಹೊರಬರುವುದು ಕಡಿಮೆಯಾಗುತ್ತದೆ. ಆನೆ ಮಾನವ ಸಂಘರ್ಷವನ್ನು ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.