ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ದಕ್ಷಿಣ ದೆಹಲಿಯ ಹಜರತ್ ನಿಜಾಮುದ್ದೀನ್ ಔಲಿಯಾ ದರ್ಗಾಕ್ಕೆ ಭೇಟಿ ನೀಡಿದರು. ನಿಜಾಮುದ್ದೀನ್ ದರ್ಗಾ ದೆಹಲಿಯ ನಿಜಾಮುದ್ದೀನ್ ಪಶ್ಚಿಮ ಪ್ರದೇಶದಲ್ಲಿರುವ ಸೂಫಿ ಸಂತ ಖ್ವಾಜಾ ನಿಜಾಮುದ್ದೀನ್ ಔಲಿಯಾ ಅವರ ದರ್ಗಾವಾಗಿದೆ.
ಮ್ಯಾಕ್ರೋನ್ ಅವರು ರಾತ್ರಿ 9.45 ರ ಸುಮಾರಿಗೆ ಭಾರತದ ಸೂಫಿ ಸಂಸ್ಕೃತಿಯ ಕೇಂದ್ರವಾದ ಸುಮಾರು 700 ವರ್ಷ ಹಳೆಯ ದರ್ಗಾ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ.
ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಬಳಿಕ ಮಾತನಾಡಿ ಭಾರತ ಮತ್ತು ಫ್ರಾನ್ಸ್ ನಡುವಿನ ದೀರ್ಘಕಾಲದ ಸ್ನೇಹವನ್ನು ಪುನರುಚ್ಚರಿಸಿದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, “ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ದೀರ್ಘಕಾಲ ಬಾಳಲಿ” ಎಂದು ಹೇಳಿದರು.