ಹಾಸನ : ಶಾಲಾ ಮಕ್ಕಳ ನೃತ್ಯ ಪ್ರದರ್ಶನ ವೇಳೆ ಮಕ್ಕಳ ಕೈಯಲ್ಲಿ ಶಿಕ್ಷಕಿ ಕಮಲದ ಹೂ ನೀಡಿದ್ದಕ್ಕೆ ಶಿಕ್ಷಕಿ ವಿರುದ್ಧ ಕಾಂಗ್ರೆಸ್ ಪಕ್ಷದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗರಂ ಆದ ಘಟನೆ ಹಾಸನದಲ್ಲಿ ನಡೆದಿದೆ.
ಗಣರಾಜ್ಯೋತ್ಸವದ ಹಿನ್ನೆಲೆ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡಿದ್ದರು. ಶಿಕ್ಷಕಿ ಮಕ್ಕಳಿಗೆ ದೇಶದ ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಹಾಕಿ ಮಕ್ಕಳಿಂದ ನೃತ್ಯ ಮಾಡಿಸುತ್ತಿದ್ದರು. ಇದರಲ್ಲಿ ಕಮಲದ ಹೂ ನೋಡಿ ಗರಂ ಆದ ಶಾಸಕ ಶಿವಲಿಂಗೇಗೌಡ ಮಕ್ಕಳ ಕೈಗೆ ಬಿಜೆಪಿ ಪಕ್ಷದ ಚಿಹ್ನೆಯನ್ನು ಯಾಕೆ ಕೊಟ್ಟಿದ್ದೀರಿ..? ನೀವೇನು ಉದ್ದಾರ ಮಾಡುತ್ತೀರಿ ಎಂದು ಗರಂ ಆಗಿದ್ದಾರೆ.
ಯಾಕೆ ಕಮಲದ ಹೂ ಹಾಕಿದ್ದೀರಿ? ತೆಗೆಯಿರಿ ಎಂದು ಶಿಕ್ಷಕಿ ವಿರುದ್ಧ ಶಾಸಕ ಶಿವಲಿಂಗೇಗೌಡ ರೊಚ್ಚಿಗೆದ್ದಿದ್ದಾರೆ.. ಅದು ರಾಷ್ಟ್ರೀಯ ಹೂ ಸರ್ ಅದಕ್ಕೆ ಹಾಕಿದ್ದೇವೆ. ಅದರ ಜೊತೆಗೆ ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಹಾಕಿದ್ದೇವೆ, ಅದರಲ್ಲೇನು ತಪ್ಪಿದೆ ಸರ್ ಎಂದು ಶಿಕ್ಷಕಿ ಹೇಳಿದ್ದಾರೆ. ಇದಕ್ಕೆ ಮತ್ತೆ ಗರಂ ಆದ ಶಾಸಕರು ‘ಏಯ್ ನಿಂಗೆ ಏನ್ ಗೊತ್ತು? ಇನ್ನೇನ್ ಉದ್ದಾರ ಮಾಡ್ತೀರ ಮಕ್ಕಳನ್ನ’ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ