ನವದೆಹಲಿ : ದೆಹಲಿಯಲ್ಲಿ ನಡೆಯತ್ತಿರುವ 75 ನೇ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ‘ರಾಮನ ಸ್ತಬ್ಧಚಿತ್ರ’ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.
75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯಪಥದಲ್ಲಿ ಪಥ ಸಂಚಲನ, ಸ್ತಬ್ಧಚಿತ್ರ ಪ್ರದರ್ಶನ ಕಳೆಗಟ್ಟಿದೆ.ಈ ವೇಳೆ ರಾಮನ ಸ್ತಬ್ಧಚಿತ್ರ’ ಪ್ರದರ್ಶನ ಕೂಡ ಎಲ್ಲರ ಗಮನ ಸೆಳೆದಿದೆ.
ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್ಗಳ ಬದಲು ಮೊದಲ ಬಾರಿಗೆ ಭಾರತೀಯ ಸಂಗೀತ ವಾದ್ಯಗಳಾದ ಸಂಖ್, ನಾದಸ್ವರಂ, ನಾಗಡವನ್ನು ನುಡಿಸುವ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ಮೆರವಣಿಗೆಗೆ ಚಾಲನೆ ನೀಡಿದ್ದಾರೆ.75ನೇ ಗಣರಾಜ್ಯೋತ್ಸವ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ಈಬಾರಿ ಗಣರಾಜ್ಯೋತ್ಸವದಲ್ಲಿ ಹಲವಾರು ವಿಶೇಷತೆಗಳು ಗಮನ ಸೆಳೆಯುತ್ತಿವೆ. ಪ್ರತಿವರ್ಷ ವಿಶೇಷ ಕಾರಿನಲ್ಲಿ ಕರ್ತವ್ಯ ಪಥ ಮಾರ್ಗದಲ್ಲಿ ಆಗಮಿಸುತ್ತಿದ್ದ ರಾಷ್ಟ್ರಪತಿಗಳು ಈಬಾರಿ ಸಾರೋಟಿನಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.