ದೇಶದಾದ್ಯಂತ 75ನೇ ಗಣರಾಜ್ಯೋತ್ಸದ ಸಂಭ್ರಮ ಮನೆ ಮಾಡಿದ್ದು,ಗಣರಾಜ್ಯೋತ್ಸವ ಅಂಗವಾಗಿ ಗೂಗಲ್ ಕೂಡ ವಿಶೇಷ ಡೂಡಲ್ ಮೂಲಕ ದೇಶದ ಜನತೆಗೆ ಶುಭಾಶಯ ಕೋರಿದೆ.
ಕಳೆದ ವರ್ಷ ಕೂಡ ಗೂಗಲ್ ಡೂಡಲ್ ರಚಿಸುವ ಮೂಲಕ ಭಾರತದ ಗಣರಾಜೋತ್ಸವವನ್ನು ಸಂಭ್ರಮಿಸಿತ್ತು. ಟಿವಿಗಳ ಯುಗದಿಂದ ಸ್ಮಾರ್ಟ್ಫೋನ್ಗಳ ಬಳಕೆಯವರೆಗೆ ತಂತ್ರಜ್ಞಾನ ಅಭಿವೃದ್ದಿಯಾದ ಕಾಲಘಟ್ಟದ ಬಗ್ಗೆ ಗೂಗಲ್ ಹಂಚಿಕೊಂಡಿದೆ. ಗೂಗಲ್ ಐತಿಹಾಸಿಕ ದಿನ ಮಹತ್ವ ಹಾಗೂ ಈ ಡೂಡಲ್ ರಚಿಸಿದ ಕಲಾವಿದರ ಬಗ್ಗೆಯೂ ವಿವರಿಸಿದೆ.
ಕಾಲ ಕಳೆದಂತೆ ಕಪ್ಪು–ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್ ಬರೆದುಕೊಂಡಿದೆ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇವೆ ಮತ್ತು ವರ್ಷಗಳಿಂದ ಈ ಐತಿಹಾಸಿಕ ದಿನವನ್ನು ಆಚರಿಸುತ್ತೇವೆ ಎಂದು ಗೂಗಲ್ ಪೋಸ್ಟ್ ಮಾಡಿದೆ.