ಬೆಂಗಳೂರು : ಕಾಂಗ್ರೆಸ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುಡ್ ಬೈ ಹೇಳಿದ್ದು, ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಕರೆ ಮಾಡಿದಾಗ ನಾನು ಹೋಗಲ್ಲ ಎಂದಿದ್ದರು, ಅವರಿಗೆ ಯಾವುದೇ ಒತ್ತಡ ಇತ್ತೋ ಗೊತ್ತಿಲ್ಲ, ಅಥವಾ ಯಾರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ . ನಾನು ಕಾಂಗ್ರೆಸ್ ಗೆ ದ್ರೋಹ ಮಾಡೋದಿಲ್ಲ ಎಂದಿದ್ರು,ಇದುವರೆಗೆ ನಮಗೆ ಅವರ ರಾಜೀನಾಮೆ ಪತ್ರ ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಶೆಟ್ಟರ್ ಅವರಿಂದ ವಿಶ್ವಾಸ ದ್ರೋಹ ಆಗಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆಶಿ ಈ ಬಗ್ಗೆ ನಾನು ಈಗ ಮಾತನಾಡಲ್ಲ. ಮುಂದೆ ಮಾತನಾಡುತ್ತೇನೆ. ಅವರಿಗೆ ಟಿಕೆಟ್ ಕೊಟ್ಟಿದ್ವಿ, ಅವರು ಸೋತರು. ಅವರನ್ನು ಎಂಎಲ್ ಸಿ ಮಾಡಿದ್ವಿ, ಅವರನ್ನು ನಾವು ಗೌರವಯುತವಾಗಿ ನಡೆಸಿಕೊಂಡಿದ್ದೆವು ಎಂದು ಪ್ರತಿಕ್ರಿಯೆ ನೀಡಿದರು.