ಮೈಸೂರು : ಅಕ್ಕಿಗೆ ಅರಿಶಿಣ ಪುಡಿ ಹಚ್ಚಿ ಅದನ್ನೇ ಜನರಿಗೆಲ್ಲಾ ಹಂಚಿದ್ದಾರೆ’ ಎಂದು ರಾಮಮಂದಿರ ಮಂತ್ರಾಕ್ಷತೆ ಬಗ್ಗೆ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವ್ಯಂಗ್ಯವಾಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೈಲುಕೊಪ್ಪದಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್ ರಾಮಮಂದಿರ ಮಂತ್ರಾಕ್ಷತೆ ಬಗ್ಗೆ ಸಚಿವ ಕೆ. ವೆಂಕಟೇಶ್ ವ್ಯಂಗ್ಯವಾಡಿದ್ದಾರೆ. ಅಕ್ಕಿಗೆ ಅರಿಶಿಣ ಪುಡಿ ಹಚ್ಚಿ ಅದನ್ನೇ ಜನರಿಗೆಲ್ಲಾ ಹಂಚಿದ್ದಾರೆ, ಜನರನ್ನು ಬಿಜೆಪಿ ಭಾವನಾತ್ಮಕವಾಗಿ ಮರಳು ಮಾಡಿದೆ ಎಂದಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಟ ಟೀಕೆ ಮಾಡಿದ್ದು, ಮಂತ್ರಾಕ್ಷತೆ ಸಿಎಂ ಸಿದ್ದರಾಮಯ್ಯ ಕೊಟ್ಟ ಅಕ್ಕಿ, ಐದು ಗ್ಯಾರಂಟಿಗಳೇ ಕಾಂಗ್ರೆಸ್ ಕೊಟ್ಟ ಮಂತ್ರಾಕ್ಷತೆ ಎಂದು ಪಿರಿಯಾಪಟ್ಟಣದ ಕೊಪ್ಪಳದಲ್ಲಿ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.