ತಿರುಚಿರಾಪಳ್ಳಿ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀರಂಗಂನ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಅರ್ಚಕರು ಪೂರ್ಣ ಕುಂಭ ಮರ್ಯಾದೈಯೊಂದಿಗೆ ಮೋದಿಯವರನ್ನು ಸ್ವಾಗತಿಸಿದರು. ತಮಿಳುನಾಡಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಶ್ರೀರಂಗಂ ಆಂಡವನ್ ಆಶ್ರಮ ವೇದಪಾಠಶಾಲೆಯ ಮಕ್ಕಳು ವೇದಘೋಷದೊಂದಿಗೆ ಸ್ವಾಗತಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.