ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ ಭಗವಾನ್ ರಾಮಲಲ್ಲಾ ಅವರ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ.
ಈ ಹಿನ್ನೆಲೆ ರಾಮನೂರಿನಲ್ಲಿ ಸಕಲ ಸಿದ್ದತೆಗಳು ಆರಂಭವಾಗಿದೆ. ರಾಮಮಂದಿರದ ಆವರಣದಲ್ಲಿ ವಿವಿಧ ರೀತಿಯ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗುತ್ತಿದೆ. ನಿನ್ನೆವರೆಗೆ ನೀವು ರಾಮಲಲ್ಲಾನ ಮೂರ್ತಿಯ ವಿಡಿಯೋ ನೋಡಿದ್ದೀರಾ..? ರಾಮಮಂದಿರದ ಭವ್ಯ ಒಳಾಂಗಣ ಹೇಗಿದೆ ಅಂತ ನೋಡಿದ್ದೀರಾ..? ಇಲ್ಲಿದೆ ನೋಡಿ ವಿಡಿಯೋ.
ಜನವರಿ 22 ರಂದು ಪ್ರಧಾನಿಯವರ ಸಮ್ಮುಖದಲ್ಲಿ ಅಭಿಜಿತ್ ಮುಹೂರ್ತದಲ್ಲಿ ರಾಮಲಲ್ಲಾ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.