![](https://kannadadunia.com/wp-content/uploads/2024/01/Shakti-yojane.jpg)
ಬೆಂಗಳೂರು : ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಶಕ್ತಿಯೋಜನೆಯಡಿ ಈವರೆಗೆ ಮಹಿಳೆಯರಿಂದ 130 ಕೋಟಿಗೂ ಹೆಚ್ಚು ಸಂಖ್ಯೆಯ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಶಕ್ತಿ ಯೋಜನೆಯ ಮೂಲಕ ಮಹಿಳಾ ಸ್ವಾವಲಂಬನೆಯ ಕನಸು ನನಸಾಗಿದೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಕರ್ನಾಟಕದ ಬಗ್ಗೆ ತಾನು ಕಂಡ ಕನಸುಗಳನ್ನು ಕರ್ನಾಟಕದ ಮಹಾಜನತೆಯ ಜೊತೆ ಹಂಚಿಕೊಂಡಿದ್ದರು.
ಐದು ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿಯವರ ಕನಸುಗಳನ್ನು ನನಸು ಮಾಡುವ ಹೊಸ ಸಾಧನಗಳಾಗಿವೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಹಿಂದೆ ಸಿದ್ದರಾಮಯ್ಯನವರ ಬದುಕಿನ ಅನುಭವಗಳಿವೆ. ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿ ಎನ್ನುವುದು ಅವರ ಕನಸಿನ ಕರ್ನಾಟಕ ಅಭಿವೃದ್ದಿಯ ಮಾದರಿಯ ಮೂಲಮಂತ್ರ. ಈ ಅಭಿವೃದ್ದಿಯ ಕೇಂದ್ರದಲ್ಲಿರುವುದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ. ನಾಡು ಮತ್ತು ನುಡಿ ಬಗೆಗಿನ ಅವರ ಪ್ರೀತಿ, ಕಾಳಜಿ ಮತ್ತು ಬದ್ಧತೆ ಪ್ರಶ್ನಾತೀತ. ಸಿದ್ದರಾಮಯ್ಯನವರು ಕನಸುಗಾರರು ಮಾತ್ರವಲ್ಲ ಕನಸುಗಳನ್ನು ನನಸು ಮಾಡುವ ಸಾಮರ್ಥ್ಯ ಮತ್ತು ಬದ್ಧತೆ ಇರುವ ಕೆಲಸಗಾರರು ಹೌದು ಎಂದು ಹೇಳಿದೆ.