ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಎಂಬಂತೆ ‘ಉದ್ಯೋಗ ಮೇಳ’ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಸಂಬಂಧ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.
ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ ಮಾಡಲು ನಿರ್ಧರಿಸಿದೆ . ಯುವನಿಧಿ ಯೋಜನೆ ಜಾರಿ ಬೆನ್ನಲ್ಲೇ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದಲೇ ಬೃಹತ್ ಉದ್ಯೋಗ ಮೇಳ ನಡೆಸಲಾಗುತ್ತದೆ.
ಸಮಿತಿ ಸದಸ್ಯರು
* ಡಾ.ಶರಣಪ್ರಕಾಶ್ ಪಾಟೀಲ್ – ಅಧ್ಯಕ್ಷರು
* ಎಂ.ಬಿ.ಪಾಟೀಲ್-ಸದಸ್ಯರು
* ಎಚ್.ಕೆ.ಪಾಟೀಲ್ -ಸದಸ್ಯರು
* ಡಾ.ಎಂ.ಸಿ.ಸುಧಾಕರ್ -ಸದಸ್ಯರು
* ದಿನೇಶ್ ಗುಂಡೂರಾವ್- ಸದಸ್ಯರು
* ಪ್ರಿಯಾಂಕ ಖರ್ಗೆ -ಸದಸ್ಯರು
* ಸಂತೋಷ್.ಎಸ್ ಲಾಡ್ – ಸದಸ್ಯರು
* ಬಿ.ನಾಗೇಂದ್ರ –ಸದಸ್ಯರು