ಅಯೋಧ್ಯೆಗೆ ಹೋಗಲು ಸಾಧ್ಯವಾಗುತ್ತಿಲ್ಲವೇ..? ಮನೆಯಲ್ಲೇ ಕುಳಿತು ಅಯೋಧ್ಯೆ ರಾಮ ಮಂದಿರದ ಪ್ರಸಾದ ಪಡೆಯಬೇಕೆ..? ಅದನ್ನು ಪಡೆಯುವುದು ಹೇಗೆ..? ಇಲ್ಲಿದೆ ನೋಡಿ ಮಾಹಿತಿ.
ಜ.22 ರಂದು ರಾಮಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದ್ದು, ನೀವು ಅಯೋಧ್ಯೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಕುಳಿತು ಪ್ರಸಾದ ಪಡೆಯಬಹುದು.
ಖಾದಿ ಆರ್ಗ್ಯಾನಿಕ್ ಎನ್ನುವ ಹೆಸರಿನ ವೆಬ್ಸೈಟ್ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಪ್ರಸಾದವನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ರಾಮ ಮಂದಿರದ ಪ್ರಸಾದವನ್ನು ನೀವು ಪಡೆಯುವುದಕ್ಕಾಗಿ ಮೊದಲು ಖಾದಿ ಆರ್ಗ್ಯಾನಿಕ್.ಕಾಮ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಇಲ್ಲಿ ಕ್ಲಿಕ್ ಮಾಡಿ ನೋಡುವ ಮೂಲಕ ನೀವು ಅಯೋರ್ಧಯೆ ರಾಮ ಮಂದಿರದ ಪ್ರಸಾದವನ್ನು ಸ್ವೀಕರಿಸಬಹುದು.
ಆರ್ಗ್ಯಾನಿಕ್.ಕಾಮ್ ವೆಬ್ಸೈಟ್ಗೆ ಭೇಟಿ ನೀಡಿ ಎಲ್ಲಾ ಮಾಹಿತಿಗಳನ್ನು ನೀಡುವ ಮೂಲಕ ಎಲ್ಲಾ ಪ್ರಕ್ರಿಯೆಗಳನ್ನು ಮುಂದುವರೆಸಿ.ನಿಮ್ಮ ಮನೆಗೆ ಪ್ರಸಾದವನ್ನು ಸ್ವೀಕರಿಸಲು ನೀವು ಡೋರ್ಸ್ಟೆಪ್ ಡೆಲಿವರಿ ಆಯ್ಕೆ ಮಾಡಿಕೊಳ್ಳಿ. ಪ್ರಸಾದವನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ 51 ಪಾವತಿಸಬೇಕಾಗುತ್ತದೆ. ಇಷ್ಟು ಮಾಡಿದರೆ ಸಾಕು ನಿಮ್ಮ ಮನೆಗೆ ಪ್ರಸಾದ ಬಂದು ತಲುಪುತ್ತದೆ.