ವಿಶಾಖಪಟ್ಟಣಂ : ಮಕರ ಸಂಕ್ರಾಂತಿಯಂದು ಮನೆಗೆ ಬಂದ ಅಳಿಯನಿಗೆ ಕುಟುಂಬವೊಂದು 300 ಆಹಾರ ಪದಾರ್ಥಗಳನ್ನು ಬಡಿಸಿದ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ. ಅತ್ತೆ ತನ್ನ ಅಳಿಯನಿಗೆ 300 ಬಗೆಯ ಆಹಾರ ಪದಾರ್ಥಗಳನ್ನು ಕೈಯಾರೆ ತಿನಿಸಿದ್ದಾರೆ.
ಆಂಧ್ರಪ್ರದೇಶದ ಎಲೂರಿನ ಕುಟುಂಬವೊಂದು ಜನವರಿ 15 ರಂದು ಸಂಕ್ರಾಂತಿ ಹಬ್ಬಕ್ಕೆ ಬಂದ ಅಳಿಯನಿಗೆ ಭಕ್ಷ್ಯ ಭೋಜನಗಳನ್ನು ಸಿದ್ದಪಡಿಸಿದೆ. ಅಕ್ಕಿ ವ್ಯಾಪಾರಿ ಗುಂಡಾ ಸಾಯಿ ದಂಪತಿ ತನ್ನ ಅಳಿಯನಿಗೆ ಇಂತಹದ್ದೊಂದು ಅದ್ದೂರಿ ಸತ್ಕಾರ ನೀಡಿದೆ.
ಕಳೆದ ತಿಂಗಳು ರಿಶಿತಾ ಹಾಗೂ ಪಿ.ದೇವೇಂದ್ರ ಮದುವೆಯಾಗಿತ್ತು. ಹೊಸ ವರ್ಷದ ಹಬ್ಬಕ್ಕೆ ಬಂದ ಅಳಿಯ-ಮಗಳಿಗೆ ದಂಪತಿಗಳು 300 ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಸತ್ಕಾರ ನೀಡಿದ್ದಾರೆ.
ಭಕ್ಷ್ಯಗಳಲ್ಲಿ ಬಿರಿಯಾನಿ, ಜೀರಾ ರೈಸ್, ಫ್ರೈಡ್ ರೈಸ್, ಟೊಮೆಟೊ ರೈಸ್, ಪುಲಿಹೋರಾ ಮತ್ತು ಡಜನ್ಗಟ್ಟಲೆ ಸಿಹಿತಿಂಡಿಗಳು ಸೇರಿವೆ. ಮೂವತ್ತು ವಿವಿಧ ರೀತಿಯ ಪಲ್ಯಗಳು, ಅನ್ನ, ಪುಲಿಹೋರಾ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್ತುಗಳು, ಹಣ್ಣುಗಳು, ಕೇಕ್ ಗಳನ್ನು ತಯಾರಿಸಲಾಯಿತು.ಭಕ್ಷ್ಯಗಳನ್ನು ತಯಾರಿಸಲು ಮೂರು ದಿನಗಳ ಕಾಲ ಶ್ರಮಿಸಿದ್ದೇನೆ ಎಂದು ಅತ್ತೆ ಹೇಳಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಮಗೂ ಇಂತಹ ಅತ್ತೆ ಮನೆಯೇ ಸಿಗಲಿ ಎಂದು ಕಮೆಂಟ್ ಮಾಡಿದ್ದಾರೆ.