ಅಯೋಧ್ಯೆ : ದೇಶವೇ ಕುತೂಹಲದಿಂದ ಕಾಯುತ್ತಿರುವ ಐತಿಹಾಸಿಕ ಕ್ಷಣ ರಾಮಮಂದಿರ ಉದ್ಘಾಟನೆಗೆ ಕೇವಲ ಐದೇ ದಿನ ಬಾಕಿ ಇದ್ದು, 2024 ರ ಜನವರಿ 22 ರಂದು ಅಧಿಕೃತವಾಗಿ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.
ಜನವರಿ 22 ರಂದು ಅಯೋಧ್ಯೆ ರಾಮ ದೇವಾಲಯವನ್ನು ಉದ್ಘಾಟಿಸಲಾಗುವುದು ಮತ್ತು ಅಂದಿನಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ರಾಮ ಮಂದಿರದಲ್ಲಿ ಭಗವಾನ್ ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮವು ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಲಿದೆ.
ಜನವರಿ 22 ರಂದು ರಾಮ ಮಂದಿರ ಪ್ರತಿಷ್ಠಾಪನೆಗೆ 84 ಸೆಕೆಂಡುಗಳ ಮಂಗಳಕರ ಸಮಯವಿದು, ಈ ಮುಹೂರ್ತ ಮಧ್ಯಾಹ್ನ 12.28ಕ್ಕೆ ಪ್ರಾರಂಭವಾಗಿ12.30ಕ್ಕೆ ಕೊನೆಗೊಳ್ಳಲಿದೆ.
ಅಭಿಜಿತ್ ಮುಹೂರ್ತ-12.11 ರಿಂದ 12.54
ಸವಾರ್ಥಸಿದ್ಧಿ ಯೋಗ-ಬೆಳಗ್ಗೆ 7.14ರಿಂದ ಮರುದಿನ ಬೆಳಗ್ಗೆ 4.58ರವರೆಗೆ
ಅಮೃತ ಸಿದ್ಧಿ ಯೋಗ ಬೆಳಗ್ಗೆ 7.14ರಿಂದ ಮರುದಿನ ಬೆಳಗ್ಗೆ 4.58ರವರೆಗೆ
ರವಿ ಯೋಗ ಬೆಳಗ್ಗೆ 4.58ರಿಂದ ಜನವರಿ 23ರ ಬೆಳಗ್ಗೆ 7.13ರವರೆಗೆ ಇರಲಿದೆ.
ಗುರುವು ಮೇಷದಲ್ಲಿ, ಚಂದ್ರನು ವೃಷಭದಲ್ಲಿ, ಕೇತುವು ಕನ್ಯಾ ರಾಶಿಯಲ್ಲಿ, ಮಂಗಳ, ಬುಧ, ಶುಕ್ರ ಧನು ರಾಶಿಯಲ್ಲಿ, ಸೂರ್ಯ ಮಕರ ರಾಶಿಯಲ್ಲಿ ಮತ್ತು ಶನಿಯು ಕುಂಭದಲ್ಲಿ ಇರುತ್ತಾರೆ. ಈ ದಿನ ಮೃಗಶಿರ ನಕ್ಷತ್ರವಿರುತ್ತದೆ ಅದನ್ನು ಮಂಗಳಕರವೆಂದು ನಂಬಲಾಗಿದೆ. ಇದರೊಂದಿಗೆ ಸರ್ವಾರ್ಥ ಸಿದ್ಧಿ ಯೋಗ ಹಾಗೂ ಅಮೃತಸಿದ್ಧಿ ಯೋಗದಂತಹ ಶುಭ ಯೋಗಗಳೂ ಈ ದಿನ ರೂಪುಗೊಳ್ಳುತ್ತಿರುವ ಕಾರಣ ಅತ್ಯಂತ ಮಂಗಳಕರವಾಗಿದೆ ಹೀಗಾಗಿ ರಾಮಮಂದಿರ ಪ್ರತಿಷ್ಠಾಪನೆಗೆ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.