ನವದೆಹಲಿ : ಮಧ್ಯಪ್ರದೇಶದ ‘ಕುನೊ’ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಮತ್ತೊಂದು ಚಿರತೆ ಮೃತಪಟ್ಟಿದೆ.
ಸಾವಿಗೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಮರಣೋತ್ತರ ಪರೀಕ್ಷೆಯ ನಂತರ ಕಂಡುಹಿಡಿಯಲಾಗುತ್ತದೆ. ಇಂದು ಬೆಳಗ್ಗೆಯಿಂದಲೇ ಮಂಕಾಗಿದ್ದ ಚೀತಾ ಶೌರ್ಯ ಸಂಜೆ 3:17 ರ ವೇಳೆಗೆ ಮೃತಪಟ್ಟಿತು ಎಂದು ಹೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ನಿತ್ರಾಣ ಸ್ಥಿತಿಯಲ್ಲಿದ್ದ ಚಿರತೆಯನ್ನು ನಿಗಾವಣಾ ತಂಡ ಗಮನಿಸಿತ್ತು. ನಂತರ ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡಿತಾದರೂ ಚೀತಾ ನಡುಗುತ್ತಿತ್ತು, ಸಂಜೆ 3:17 ರ ವೇಳೆಗೆ ಮೃತಪಟ್ಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
Today, on 16th January, 2024 around 3:17 PM, Namibian Cheetah Shaurya passed away…Cause of death can be ascertained after Post Mortem: Director Lion Project pic.twitter.com/ISc2AlCNcy
— ANI (@ANI) January 16, 2024
.

