ಲೋಕಸಭೆ ಚುನಾವಣೆಯಲ್ಲಿ ಬಿ ಎಸ್ ಪಿ( ಬಹುಜನ ಸಮಾಜ ಪಕ್ಷ) ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಬಿ ಎಸ್ ಪಿ ನಾಯಕಿ ಮಾಯಾವತಿ ಮಹತ್ವದ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಲೋಕಸಭೆ ಚುನಾವಣೆಯಲ್ಲಿ ಬಿ ಎಸ್ ಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಯಾರ ಜೊತೆಗೂ ಮೈತ್ರಿ ಇಲ್ಲ, ಮೈತ್ರಿ ಮಾಡಿಕೊಂಡು ಹೋದರೆ ಚುನಾವಣೆಗೆ ಕಷ್ಟ ಆಗುತ್ತದೆ. ಯಾವುದೇ ಕಾರಣಕ್ಕೂ ಇಂಡಿಯಾ ಒಕ್ಕೂಟಕ್ಕೆ ಸೇರುವುದಿಲ್ಲ. ಬಹುತೇಕ ಪಕ್ಷಗಳು ಬಿಎಸ್ ಪಿ ಜೊತೆ ಸೇರಲು ಬಯಸುತ್ತಿದೆ ಎಂದು ಅವರು ಹೇಳಿದರು.