ನವದೆಹಲಿ: ದೆಹಲಿ, ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಹಿನ್ನೆಲೆ 100 ವಿಮಾನಗಳ ಹಾರಾಟ ವಿಳಂಬವಾಗಿದ್ದು, ರೈಲು ಸಂಚಾರ ಅಸ್ತವ್ಯಸ್ತವಾಗಿದೆ.
ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ದೆಹಲಿಗೆ ಹೋಗುವ ಹದಿನೆಂಟು ರೈಲುಗಳು ಇಂದು ಒಂದು ಗಂಟೆಯಿಂದ ಆರು ಗಂಟೆಗಳವರೆಗೆ ವಿಳಂಬವಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.ದಟ್ಟ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಮತ್ತು 84 ವಿಮಾನಗಳನ್ನು ರದ್ದುಪಡಿಸಲಾಗಿದೆ.
ಸಾವಿರಾರು ಪ್ರಯಾಣಿಕರು ತಮ್ಮ ವಿಮಾನಗಳಿಗಾಗಿ ಕಾಯುತ್ತಿರುವುದರಿಂದ ದೆಹಲಿ ವಿಮಾನ ನಿಲ್ದಾಣವು ದಟ್ಟವಾದ ಮಂಜಿನ ಎಚ್ಚರಿಕೆಯನ್ನು ನೀಡಿದೆ. ದೆಹಲಿ ಮತ್ತು ಕೋಲ್ಕತಾದಲ್ಲಿನ ಕೆಟ್ಟ ಹವಾಮಾನವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಇಂಡಿಗೊ, ಸ್ಪೈಸ್ ಜೆಟ್ ಮತ್ತು ವಿಸ್ತಾರಾದಂತಹ ಹಲವಾರು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಮುಂಜಾನೆ ದೆಹಲಿ-ಕೋಲ್ಕತಾ ವಿಮಾನವನ್ನು ಹೈದರಾಬಾದ್ ಗೆ ತಿರುಗಿಸಲಾಗಿದೆ ಎಂದು ವಿಸ್ತಾರಾ ತಿಳಿಸಿದೆ.