![](https://kannadadunia.com/wp-content/uploads/2023/11/bapuji-seva-kendra.png)
ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ್ದು, ನಾಡಿನ ಗ್ರಾಮೀಣ ಭಾಗದ ಜನರ ಹೆಚ್ಚಿನ ಅನುಕೂಲಕ್ಕಾಗಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆಗಳನ್ನು ಕಲ್ಪಿಸಲು ಮುಂದಾಗಿದೆ.
ಗ್ರಾಮ ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಪತ್ರ ಸೇರಿದಂತೆ ಒಂದೇ ಸೂರಿನಡಿ ಮಹತ್ವದ ಬರೋಬ್ಬರಿ 72 ಸೇವೆಗಳು ದೊರೆಯುವಂತೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಸರಳೀಕೃತ ವ್ಯವಸ್ಥೆಯಿಂದ ಗ್ರಾಮೀಣ ಜನತೆ ಸಾರ್ವಜನಿಕ ಸೇವೆಗಳನ್ನು ಪಡೆದುಕೊಳ್ಳುವುದು ಇನ್ನಷ್ಟು ಸುಲಭವಾಗಲಿದೆ. ಜನಪರ ನಿರ್ಧಾರ ಹಾಗೂ ಕಾರ್ಯಗಳೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದೆ. ಗ್ರಾಮೀಣ ಜನರು ಈ ಸೇವೆಗಳ ಸದುಪಯೋಗ ಪಡೆದುಕೊಳ್ಳಬಹುದು.
ಬಾಪೂಜಿ ಸೇವಾ ಕೇಂದ್ರದಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು
![](https://kannadadunia.com/wp-content/uploads/2024/01/WhatsApp-Image-2024-01-09-at-10.57.55-AM.jpeg)