ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್ ಸ್ವಚ್ಛಗೊಳಿಸಿದಲ್ಲಿ ಅಥವಾ ಮಲ ಹೊರುವ ಪದ್ಧತಿಗೆ ಪ್ರೋತ್ಸಾಹಿಸಿದಲ್ಲಿ ಕಾಯ್ದೆ ಅನುಸಾರ ಒಂದು ವರ್ಷದ ವರೆಗೂ ಜೈಲು ವಾಸ ಜೊತೆಗೆ ದಂಡ ಅಥವಾ ಎರಡು ರೀತಿಯಲ್ಲೂ ಕಾನೂನು ರೀತ್ಯಾ ಕ್ರಮಜರುಗಿಸಲಾಗುವುದು ಎಂದು ಮಡಿಕೇರಿ ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.
ತಲೆಮೇಲೆ ಮಲ ಹೊರುವುದು ಹಾಗೂ ತೆರೆದ ಚರಂಡಿಗೆ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅದರಂತೆ ‘ದಿ ಎಂಪ್ಲಾಯ್ಮೆಂಟ್ ಆಫ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಆಂಡ್ ಡ್ರೈ ಲ್ಯಾಟ್ರಿನ್ ಆಕ್ಟ್ 2013 ರ ರೀತ್ಯಾ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್ನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿರುವುದರಿಂದ ನಗರಸಭೆಯಲ್ಲಿ 3000 ಲೀಟರ್ ಸಾಮಥ್ರ್ಯದ ಸಕ್ಕಿಂಗ್ಯಂತ್ರ ಹೊಂದಿರುವ ವಾಹನವು ಲಭ್ಯವಿದ್ದು, ನಿಗಧಿತ ಶುಲ್ಕವನ್ನು ಪಾವತಿಸಿ, ನಗರಸಭೆ ವಾಹನದಿಂದ ಶೌಚಾಲಯದ ಪಿಟ್ಗಳನ್ನು ಸ್ವಚ್ಛಗೊಳಿಸಬೇಕು.
ಈ ಕಾಯ್ದೆಯನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿಯಿಂದ ಶೌಚಾಲಯದ ಪಿಟ್ನ್ನು ಸ್ವಚ್ಛಗೊಳಿಸಿದಲ್ಲಿ ಅಥವಾ ಮಲ ಹೊರುವ ಪದ್ಧತಿಗೆ ಪ್ರೋತ್ಸಾಹಿಸಿದಲ್ಲಿ ಕಾಯ್ದೆ ಅನುಸಾರ ಒಂದು ವರ್ಷದ ವರೆಗೂ ಜೈಲು ವಾಸ ಜೊತೆಗೆ ದಂಡ ಅಥವಾ ಎರಡು ರೀತಿಯಲ್ಲೂ ಕಾನೂನು ರೀತ್ಯಾ ಕ್ರಮಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.