ಬೆಳಗಾವಿ : ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಮಸೂದೆ 2023 ಕ್ಕೆ ಶನಿವಾರ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಈ ಮೂಲಕ ಜ.1 ರಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ವಾಹನಗಳ ಮೇಲಿನ ತೆರಿಗೆ ಹೆಚ್ಚಳವಾಗಲಿದೆ.
ಈ ಕಾಯಿದೆಯಡಿಯಲ್ಲಿ ಸರಕು ಸೇವಾ ವಾಹನ, ಶಾಲಾ ಒಡೆತನದ ವಾಹನಗಳು, ಕ್ಯಾಬ್ ಗಳು. ಎಲೆಕ್ಟ್ರಿಕ್ ವಾಹನಗಳ ನೋಂದಣಿ ತೆರಿಗೆ ಹೆಚ್ಚಳವಾಗಲಿದೆ.
ಕೆಲವು ಸರಕು ಸಾಗಾಣೆ ವಾಹನ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಒಳಗಿನ ಕ್ಯಾಬ್ ಗಳಿಗೆ ಜೇವಿತಾವಧಿ ಮೋಟಾರ್ ವಾಹನ ತೆರಿಗೆ ವಿಧಿಸುವ, ಶಾಲಾ -ಕಾಲೇಜು ಬಸ್ ಗಳ ಮೋಟಾರು ವಾಹನ ತೆರಿಗೆ ಹೆಚ್ಚಳ ಸಂಬಂಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಶಾಲಾ ವಾಹನಗಳಿಗೆ 10ನೇ ತರಗತಿವರೆಗೆ ಪ್ರತಿ ಚದರ ಮೀಟರ್ ಗೆ ವಿಧಿಸುತ್ತಿದ್ದ ತೆರಿಗೆಯನ್ನು 20 ರೂ. ನಿಂದ 100 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಶಾಲಾ ಬಸ್ ವಾರ್ಷಿಕ 2,000 ರೂ. ತೆರಿಗೆ ಪಾವತಿಸುತ್ತಿದ್ದಲ್ಲಿ ಇನ್ನು ಮುಂದೆ 10,000 ರೂ. ಪಾವತಿಸಬೇಕಿದೆ.
ಸರಕು ವಾಹನಗಳನ್ನು ಅವುಗಳ ತೂಕ-ಸಾಗಿಸುವ ಸಾಮರ್ಥ್ಯದ ಪ್ರಕಾರ 1,500 ಕೆಜಿಯಿಂದ 9,500 ಕೆಜಿಯವರೆಗೆ ತೆರಿಗೆಯು 20,000 ದಿಂದ 80,000ವರೆಗೆ ವರ್ಗೀಕರಿಸಲಾಗಿದೆ. ಸರಕು ಸಾಗಾಣೆ ವಾಹನಗಳು ಮತ್ತು ಕ್ಯಾಬ್ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು, ಈ ಮೊದಲಿನಂತೆ ತ್ರೈ ಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
![](https://kannadadunia.com/wp-content/uploads/2023/12/tax-1.jpg)
![](https://kannadadunia.com/wp-content/uploads/2023/12/Tax-2.jpg)
![](https://kannadadunia.com/wp-content/uploads/2023/12/Tax-3.jpg)
![](https://kannadadunia.com/wp-content/uploads/2023/12/Tax-4.jpg)
![](https://kannadadunia.com/wp-content/uploads/2023/12/Tax-5.jpg)
![](https://kannadadunia.com/wp-content/uploads/2023/12/Tax-6.jpg)
![](https://kannadadunia.com/wp-content/uploads/2023/12/Tax-7.jpg)
![](https://kannadadunia.com/wp-content/uploads/2023/12/Tax-8.jpg)