![](https://kannadadunia.com/wp-content/uploads/2020/11/vidhana-soudha-750-1-jpg_710x400xt-1.jpg)
ಬೆಂಗಳೂರು : ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು, ನವೋದ್ಯಮಿಗಳು ಮತ್ತು ಇತರೆ ಫಲಾನುಭವಿಗಳಿಗಾಗಿ ಕೃಷಿ ನವೋದ್ಯಮ ಯೋಜನೆಯಡಿ ಆರ್ಥಿಕ ಸೌಲಭ್ಯವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಗಳು ಹಾಗೂ ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜಿಸಲು ಕೃಷಿ ನವೋದ್ಯಮ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ.
ಹೊಸ ಕೃಷಿ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡಲು ಕೃಷಿ ಕ್ಷೇತ್ರದಲ್ಲಿ ನೂತನ ಪರಿಕಲ್ಪನೆಯೊಂದಿಗೆ ಆರಂಭಿಸುವ ಹೊಸ ಕೃಷಿ ನವೋದ್ಯಮಿಗಳಿಗೆ ಅನುಮೋದಿತ ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನವನ್ನು ಕನಿಷ್ಠ ರೂ 5.0 ಲಕ್ಷದಿಂದ ಗರಿಷ್ಠ ರೂ 20.0 ಲಕ್ಷಗಳವರೆಗೆ ಬ್ಯಾಂಕ ಮುಖಾಂತರ ಸಾಲದ ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಹಾಗೂ ಉನ್ನತೀಕರಣಕ್ಕಾಗಿ ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನವನ್ನು ಒದಗಿಸಲಾಗುವುದು. ಕನಿಷ್ಠ ರೂ 20.0ಲಕ್ಷದಿಂದ ಗರಿಷ್ಠ ರೂ 50.0 ಲಕ್ಷಗಳವರೆಗೆ. ಆಯ್ಕೆಯಾದ ನವೋದ್ಯಮಿಗಳ ಸಾಮಥ್ರ್ಯಾಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ, ಐಸಿಎಆರ್ ಹಾಗೂ ಇತರೆ ಸಂಶೋಧನಾ ಸಂಸ್ಥೆಗಳ ಮೂಲಕ ತರಬೇತಿಗಳನ್ನು ನೀಡಲಾಗುವುದು.
ಕೃಷಿ ವಲಯದಲ್ಲಿ ನವೋದ್ಯಮ ಕೈಗೊಳ್ಳುವ ಹೊಸ ಕೃಷಿ ನವೋದ್ಯಮಿಗಳಿಗೆ ಹಾಗೂ ಈಗಾಗಲೇ ಸ್ಥಾಪಿಸಲಾದ ಕೃಷಿ ನವೋದ್ಯಮಗಳ ವಿಸ್ತರಣೆ, ಉನ್ನತೀಕರಣಕ್ಕಾಗಿ ಆರ್ಥಿಕ ನೆರವು ಒದಗಿಸಲು ಕೃಷಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾದ ಕೆ ಕಿಸಾನ ವೆಬ್ ಪುಟದ ಮುಖಾಂತರ ಅರ್ಜಿಗಳನ್ನು ಆನಲೈನ್ ಮೂಲಕ ಸಲ್ಲಿಸಬಹುದು.
ಆಸಕ್ತ ನವೋದ್ಯಮಿಗಳು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.