ಬೆಂಗಳೂರು : ರಾಜ್ಯದ ಕಟ್ಟಡ ಕಾರ್ಮಿಕರಿಗೆ ಸಿಹಿಸುದ್ದಿ, ಶ್ರಮಿಕ ಸಂಜೀವಿನಿ ಯೋಜನೆಯಡಿ ಕೆಲಸದ ಸ್ಥಳದಲ್ಲೇ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ.
ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನವು ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಕೆಲಸದ ಸ್ಥಳದಲ್ಲೇ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಸಹಾಯವಾಣಿ 155214 ಕ್ಕೆ ಕರೆ ಮಾಡಿ.
ಶ್ರಮಿಕ ಸಂಜೀವಿನಿ ಉಚಿತ ಆರೋಗ್ಯ ಸೇವೆ
ಕಾರ್ಮಿಕರ ಕೆಲಸದ ಸ್ಥಳಗಳಿಗೇ ತೆರಳಿ ಈ ಸಂಚಾರಿ ವಾಹನಗಳು ಚಿಕಿತ್ಸಾ ಸೌಲಭ್ಯ ಒದಗಿಸುತ್ತವೆ.
ನೋಂದಾಯಿತ ಕಾರ್ಮಿಕರ ಅವಲಂಬಿತರೂ ಈ ವಾಹನದ ಸೌಲಭ್ಯ ಪಡೆಯಬಹುದು.
ಪ್ರಥಮ ಚಿಕಿತ್ಸೆ, ವೈದ್ಯಕೀಯ ಸಲಹೆ, ಪ್ರಯೋಗಾಲಯ ಸೌಲಭ್ಯ ಅಗತ್ಯ ಔಷಧೋಪಚಾರ ಲಭ್ಯ.