![](https://kannadadunia.com/wp-content/uploads/2023/12/cyber-crime.jpg)
ಬೆಂಗಳೂರು : ಹೊಸದಾಗಿ ಬಂದಿರುವ ಎಐ ತಂತ್ರಜ್ಞಾನದಿಂದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಚ್ಚರದಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಎ.ಐ ತಂತ್ರಜ್ಞಾನದಿಂದ ಪರಿಚಿತರ ಧ್ವನಿ ಅನುಕರಿಸಿ ವಂಚಿಸುವವರ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ವೈಯಕ್ತಿಕ ಮಾಹಿತಿ ವಿನಿಮಯವೇ ಸೈಬರ್ ವಂಚನೆಗೆ ಪ್ರಮುಖ ರಹದಾರಿಯಾಗಿದೆ. ಅಪರಿಚಿತರ ಜೊತೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಜಾಗ್ರತೆ ವಹಿಸಿದರೆ ಸಂಭವನೀಯ ಸೈಬರ್ ವಂಚನೆ ಪ್ರಕರಣಗಳು ಕಡಿಮೆಯಾಗುತ್ತವೆ.
ಸೈಬರ್ ವಂಚನೆ: ಎ.ಐ ಮಿಮಿಕ್ರಿ ಕರೆ ಬಗ್ಗೆ ಇರಲಿ ಜಾಗ್ರತೆ
ಎ.ಐ ತಂತ್ರಜ್ಞಾನದಿಂದ ಪರಿಚಿತರ ಧ್ವನಿ ಅನುಕರಿಸಿ ವಂಚಿಸುವವರ ಬಗ್ಗೆ ಎಚ್ಚರಿಕೆಯಿಂದಿರಿ
ಧ್ವನಿಯನ್ನು ಸೂಕ್ಷ್ಮವಾಗಿ ಆಲಿಸಿ
ಪರಿಚಯಸ್ಥರ ಹೆಸರಲ್ಲಿ ಕರೆ ಮಾಡಿ ಹಣ ಕೇಳಿದರೆ ಎಚ್ಚರವಾಗಿರಿ • ಕೃತಕ ಕರೆಯೋ / ಪರಿಚಿತರದ್ದೋ ಎ೦ಬುದನ್ನು ಖಾತರಿ ಪಡಿಸಿಕೊಳ್ಳಿ
ಅನುಮಾನ ಹುಟ್ಟಿಸುವ ಕರೆಗಳನ್ನು ತಕ್ಷಣ ಕಡಿತಗೊಳಿಸಿ
ವಿಶೇಷ ಮುನ್ನೆಚ್ಚರಿಕೆ:
ಎ.ಐ ಮಿಮಿಕ್ರಿ ವಂಚನೆ ಕರೆಗಳು ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಬರುತ್ತಿದ್ದು, ಕನ್ನಡ ಭಾಷೆಯಲ್ಲೂ ಬರುವ ಸಾಧ್ಯತೆಯಿದೆ