ಬೆಂಗಳೂರು : ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರವು ಸೈಬರ್ ವಂಚನೆ ತಡೆಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಇದನ್ನು ತಪ್ಪದೇ ಪಾಲಿಸುವಂತೆ ಸೂಚನೆ ನೀಡಿದೆ.
ಸೈಬರ್ ವಂಚನೆಯಿಂದ ಪಾರಗಲು ಪ್ರಮುಖ ದಾರಿ ಮುಂಜಾಗ್ರತೆ ವಹಿಸುವುದಾಗಿದೆ. ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ಮಾಹಿತಿ, ಒಟಿಪಿ, ಪಾಸ್‌ವರ್ಡ್ ಇತ್ಯಾದಿ ಮಾಹಿತಿಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ.
ಫೋನ್ ಮೂಲಕ ಕರೆ ಮಾಡಿ ಯಾರೇ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ಸಂಪರ್ಕಿಸಿದರೂ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಾರದು. ಬ್ಯಾಂಕ್ ವ್ಯವಹಾರವನ್ನು ಅಧಿಕೃತ ಆ್ಯಪ್ ಮೂಲಕ ಅಥವಾ ಖುದ್ದಾಗಿ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ನಡೆಸುವುದು ಅತ್ಯಂತ ಸೂಕ್ತ ಎಂದು ತಿಳಿಸಿದೆ.