alex Certify ವಾಹನ ಸವಾರರ ಗಮನಕ್ಕೆ : ʻಸಂಚಾರಿ ನಿಯಮ ಉಲ್ಲಂಘನೆʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರ ಗಮನಕ್ಕೆ : ʻಸಂಚಾರಿ ನಿಯಮ ಉಲ್ಲಂಘನೆʼ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ವಾಹನ ಸವಾರರಿಗೆ ಸಂಚಾರಿ ಪೊಲೀಸ್‌ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಯ ಕುರಿತಂತೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತು ಸುತ್ತೋಲೆ ಹೊರಡಿಸಿದೆ. 

ರಾಜ್ಯದ ಎಲ್ಲಾ ನಗರ/ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸರು ಮತ್ತು ಸಂಚಾರ ಪೊಲೀಸರು ಒಳಗೊಂಡಂತೆ ತಮ್ಮ ಕರ್ತವ್ಯಗಳಲ್ಲಿ ವಾಹನ ಚಾಲಕರು/ಸವಾರರು ಸಂಚಾರಿ ನಿಯಮ ಪಾಲಿಸುವಂತೆ ಜಾರಿಗೊಳಿಸುವುದು ಪ್ರಮುಖ ಜವಬ್ದಾರಿಯುತ ಕರ್ತವ್ಯವಾಗಿರುತ್ತದೆ. ಈ ಜವಾಬ್ದಾರಿಯು ವಾಹನ ಚಾಲಕರು/ಸವಾರರು ಮಾಡುವ ಮೋಟಾರ್ ವಾಹನ ನಿಯಮ ಉಲ್ಲಂಘನೆಗಳು ಮತ್ತು ಇದರಿಂದ ಉಂಟಾಗುವ ಸಂಚಾರ ಸಮಸ್ಯೆಗಳನ್ನು ತಡೆಗಟ್ಟಲು ಸಂಚಾರ ನಿಯಮಾವಳಿ ಹಾಗೂ ಕಾಯ್ದೆಯನ್ನು ಜಾರಿಗೊಳಿಸುವುದು ಹಾಗೂ ಇದನ್ನು ಸಮರ್ಪಕವಾಗಿ ನಿರ್ವಹಿಸಲು ಅನುಸರಿಸುವ ಪದ್ಧತಿ ಮತ್ತು ಉದ್ದೇಶವನ್ನು ಅಧಿಕಾರಿಗಳು ಅರಿತಿರುವುದು ಒಳ್ಳೆಯದು ಎಂದು ತಿಳಿಸಿದೆ.

ರಾಜ್ಯದ ಎಲ್ಲಾ ನಗರ ಮತ್ತು ಜಿಲ್ಲಾ ಘಟಕಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಲು ಹಾಗೂ ಅಪಘಾತಗಳ ನಿಯಂತ್ರಣ ಮಾಡಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ನಿಯಮಾವಳಿ ಹಾಗೂ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಾಗಲೇ ಅಪಘಾತಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದರ ಜೊತೆಗೆ ಸಹ ಸುಗಮಗೊಳಿಸಬಹುದಾಗಿದೆ ಎಂದು ಹೇಳಿದೆ.

ನಿಯಮ ವೇಳೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರು/ಸವಾರರ ವಿರುದ್ಧ ಮೋಟಾರ್ ವಾಹನ ನಿಯಮ/ಕಾಯ್ದೆ ಅಡಿಯಲ್ಲಿ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿರುವುದು ಸರಿಯಷ್ಟೆ. ಈ ಉಲ್ಲಂಘನೆಗಳಲ್ಲಿ ಗುರುತರ ಉಲ್ಲಂಘನೆಗಳ್ಯಾವುವು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು ಮತ್ತು ಕ್ರಮಬದ್ಧ ವಿಧಾನಗಳ ಸೂಕ್ತ ಪಾಲನೆ ಮಾಡಿದಲ್ಲಿ ಮಾತ್ರ ನಿಯಮ ಜಾರಿಯ ಉದ್ದೇಶ ಸಫಲವಾಗುವುದು ಎಂದು ತಿಳಿಸಿದೆ.

ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ದಾಖಲಿಸುತ್ತಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ಬಗ್ಗೆ ವಿಸ್ತಾರವಾಗಿ ಅರಿತುಕೊಳ್ಳುವ ಸಲುವಾಗಿ ಈ ಉಲ್ಲಂಘನೆಗಳನ್ನು 2 ವರ್ಗಗಳಲ್ಲಿ ಈ ಕೆಳಕಂಡಂತೆ. ವಿಂಗಡಿಸಲಾಗಿದೆ.

ವರ್ಗ-1 ರಡಿಯಲ್ಲಿನ ಉಲ್ಲಂಘನೆಗಳು : ಈ ಉಲ್ಲಂಘನೆಗಳು ಗುರುತರ ಉಲ್ಲಂಘನೆಗಳಾಗಿರುತ್ತದೆ.

  1. ಮದ್ಯಪಾನ ಮಾಡಿ ಚಾಲನೆ
  2. ಅತೀ ವೇಗ ಚಾಲನೆ
  3. ಅಜಾಗರೂಕ ಚಾಲನೆ
  4. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು
  5. ಜಂಪಿಂಗ್ ಟ್ರಾಫಿಕ್ ಸಿಗ್ನಲ್

     6.ಫ್ರಿವಿಲಿಂಗ್

  1. ರೇಸಿಂಗ್ ಮತ್ತು ವೇಗದ ಪ್ರಯೋಗ
  2. ಶಿಸ್ತು ಪಥ ಚಾಲನೆ ಮಾಡದೇ ಇರುವುದು
  3. ಜಿಗ್‌ ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ
  4. ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು.
  5. ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು.
  6. ಇಂಟರ್ ಸೆಕ್ಷನ್‌ನಲ್ಲಿ ವಾಹನ ನಿಲುಗಡೆ
  7. ಬಿ.ಎಂ.ಟಿ.ಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು
  8. ಶಿರಸ್ತ್ರಾಣ (ಹೆಲೈಟ್) ಧರಿಸದೆ ದ್ವಿಚಕ್ರ ವಾಹನ ಚಾಲನೆ
  9. ದ್ವಿಚಕ್ರ ವಾಹನದಲ್ಲಿ ಸವಾರರು/ಹಿಂದಿನ ಸವಾರರ ಶಿರಸ್ತ್ರಾಣ (ಹೆಲೈಟ್) ಧರಿಸದಿರುವುದು.
  10. ಸುರಕ್ಷತೆಯ ಸೀಟ್ ಬೆಲ್ಟ್ ಧರಿಸದಿರುವುದು.
  11. ಎಡಭಾಗದಿಂದ ಓವರ್ ಟೇಕ್ ಮಾಡುವುದು.
  12. ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಕರೆದೊಯ್ಯುವುದು
  13. ವಾಹನಗಳ ಮೇಲ್ಪಾವಣೆ(Roof top) ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು
  14. ಪ್ರಯಾಣಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು
  15. ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುವುದು
  16. ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಶಾಲಾ ಬಸ್/ವ್ಯಾನ್ಗಳಲ್ಲಿ ಕರೆದೊಯ್ಯುವುದು
  17. ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು
  18. ಟ್ರಿಪಲ್ ರೈಡಿಂಗ್
  1. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು.
  2. ಪ್ರವೇಶ ನಿಷಿದ್ಧ

ವರ್ಗ-2 ರಡಿಯಲ್ಲಿನ ಉಲ್ಲಂಘನೆಗಳು

  1. ಹೈಬೀಮ್ ಲೈಟ್ ಗಳನ್ನು ವಾಹನಗಳಲ್ಲಿ ಬಳಸುವುದು
  2. ತೀಕ್ಷ್ಯ ಬಿರುವ ಹೆಡ್ಲೈಟ್‌ಗಳನ್ನು ಬಳಸುವುದು
  3. ವಾಹನ ಚಾಲನೆ ಮಾಡುವಾಗ ಕರ್ಕಶ ಹಾರ್ನ್ ಅನ್ನು ಬಳಸುವುದು
  4. ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು.
  5. ದೋಷಪೂರಿತ ಸೈಲನ್ಸರ್ ಅನ್ನು ಬಳಸುವುದು.
  6. ವಾಹನಗಳಲ್ಲಿ ಉದ್ದವಾದ ವಸ್ತು (Lengthy Material) ಗಳನ್ನು ಒಯ್ಯುವುದು
  7. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು
  8. ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡುವುದು
  9. ರಹದಾರಿ (ಪರ್ಮಿಟ್) ಇಲ್ಲದೇ ವಾಹನ ಚಾಲನೆ ಮಾಡುವುದು
  10. ಆಟೋರಿಕ್ಷ ಚಾಲಕರು ನಿಗಧಿಪಡಿಸಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಒತ್ತಾಯಿಸುವುದು
  11. ಆಟೋರಿಕ್ಷ ಚಾಲಕರು ಬಾಡಿಗೆಗೆ ಕರೆದೊಯ್ಯಲು ನಿರಾಕರಿಸುವುದು
  12. ಡಿಸ್‌ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು
  13. ವಾಹನಗಳ ಗ್ಲಾಸ್‌ ಗಳಿಗೆ ಬ್ಲಾಕ್ ಫಿಲ್ಡ್ ಬಳಕೆ ಮಾಡುವುದು.
  14. ಡಿಫೆಕ್ಟಿವ್ ರಿಜಿಸ್ಟರ್ ಪ್ಲೇಟ್
  15. ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು
  16. ಇನ್ಸೂರೆನ್ಸ್ ಪ್ರಮಾಣ ಪತ್ರವನ್ನು ಹೊಂದದಿರುವುದು
  17. ಪರ್ಮಿಟ್ ಅನ್ನು ಉಲ್ಲಂಘಿಸುವುದು
  18. ಹೆಚ್.ಟಿ.ವಿ (ಭಾರಿ) ವಾಹನಗಳ ಪ್ರವೇಶವನ್ನು ಉಲ್ಲಂಘಿಸುವುದು
  19. ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...