ಕಾಫಿ ಬಹುತೇಕ ಎಲ್ಲರ ಫೇವರಿಟ್ ಡ್ರಿಂಕ್. ಕೆಲವರು ದಿನಕ್ಕೆ ಒಂದೋ ಎರಡೋ ಕಪ್ ಕಾಫಿ ಕುಡೀತಾರೆ. ಇನ್ನು ಕೆಲವರು ಐದಾರು ಕಪ್ ಕಾಫಿಯನ್ನು ಸವಿದಿರ್ತಾರೆ. ದಿನಕ್ಕೆ ಐದು ಕಪ್ ಕಾಫಿ ಕುಡಿಯುವವರಿಗೆಲ್ಲ ಸಮಾಧಾನಕರ ಸುದ್ದಿಯೊಂದಿದೆ.
ದಿನಕ್ಕೆ 5 ಕಪ್ ಕಾಫಿ ಕುಡಿದ್ರೆ ಲಿವರ್ ಕ್ಯಾನ್ಸರ್ ನಿಮ್ಮಿಂದ ದೂರ ಓಡುತ್ತೆ. ಕಾಫಿ ಕುಡಿಯೋದ್ರಿಂದ ಲಿವರ್ ಕ್ಯಾನ್ಸರ್ ಬರುವ ಸಾಧ್ಯತೆ ಅರ್ಧದಷ್ಟು ಕಡಿಮೆಯಾಗುತ್ತೆ. ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ.
ಅತಿ ಹೆಚ್ಚು ಸಾವುಗಳಿಗೆ ಕಾರಣ ಹಿಪೆಟೋಸೆಲ್ಯುಲರ್ ಕ್ಯಾನ್ಸರ್. ಕಾಫಿ ಕುಡಿಯೋದ್ರಿಂದ ಇದನ್ನು ತಡೆಗಟ್ಟಬಹುದು. ಒಂದು ಕಪ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿದ್ರೆ ಎಚ್ ಸಿ ಸಿ ಅಪಾಯ ಶೇ.20ರಷ್ಟು ಕಡಿಮೆಯಾಗುತ್ತದೆ.
ಎರಡು ಕಪ್ ಗಿಂತ ಜಾಸ್ತಿ ಕಾಫಿ ಕುಡಿಯುವವರಿಗೆ ಈ ಕ್ಯಾನ್ಸರ್ ಬರುವ ಅಪಾಯ ಶೇ.35 ರಷ್ಟು ಕಡಿಮೆಯಾಗುತ್ತದೆ. ಹಾಗಂತ ಎಲ್ಲರೂ ದಿನಕ್ಕೆ ಐದು ಕಪ್ ಕಾಫಿ ಕುಡಿಯಲೇಬೇಕು ಅಂತಲ್ಲ. ಅಧಿಕ ಪ್ರಮಾಣದಲ್ಲಿ ಕೆಫಿನ್ ಸೇವನೆ ಕೂಡ ಆರೋಗ್ಯಕ್ಕೆ ಹಾನಿಕಾರಕ.
ಅದರಲ್ಲೂ ಗರ್ಭಿಣಿಯರಂತೂ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಅಥವಾ ಚಹಾ ಸೇವನೆ ಮಾಡಬಾರದು. ಯಾಕಂದ್ರೆ ಅತಿಯಾದ್ರೆ ಅಮೃತವೂ ವಿಷವಾಗತ್ತೆ ಅನ್ನೋ ಮಾತೇ ಇದೆಯಲ್ಲ.