ರಸ್ತೆಯಲ್ಲಿ, ಬಸ್ ಮೇಲೆ ಇಲ್ಲ ಪಾರ್ಕ್ ನಲ್ಲಿ ಸುಂದರ ಹುಡುಗಿಯರನ್ನು ನೋಡ್ತೀರಾ. ಅವರ ಜೊತೆಗಿರುವ ಬಾಯ್ ಫ್ರೆಂಡ್ ನೋಡಿ ಹುಬ್ಬೇರಿಸ್ತೀರಾ. ಹುಡುಗಿ ಸುಂದರವಾಗಿದ್ದಾಳೆ. ಆಕೆ ಗೆಳೆಯ ಮಾತ್ರ ಕೆಟ್ಟದಾಗಿದ್ದಾನೆ. ಇಬ್ಬರ ಜೋಡಿ ಚೆನ್ನಾಗಿಲ್ಲ. ಹೇಗೆ ಆತನನ್ನು ಲವ್ ಮಾಡ್ತಾಳೋ ಅಂತಾ ಮನಸ್ಸಿನಲ್ಲಿ ಅಂದುಕೊಳ್ತೀರಾ.
ಸುಂದರ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಕಲೆ ಆತನಿಗಿದೆ ಬಿಡು ಅಂತಾ ಕೆಲವರು ಅಂದುಕೊಂಡ್ರೆ ಮತ್ತೆ ಕೆಲವರು ಜೇಬಿನಲ್ಲಿ ಹಣವಿರಬೇಕು. ಹಾಗಾಗಿ ಹುಡುಗಿ ಹಿಂದೆ ಬಿದ್ದಿದ್ದಾಳೆಂದು ಮಾತನಾಡಿಕೊಳ್ತಾರೆ. ಆದ್ರೆ ನೀವಂದುಕೊಳ್ಳೋದು ತಪ್ಪು. ಹುಡುಗ ಹಾಗೂ ಹುಡುಗಿ ಆಯ್ಕೆ ಭಿನ್ನವಾಗಿರುತ್ತದೆ. ತೆಳ್ಳಗೆ, ಬೆಳ್ಳಗೆ ಇರುವ ಹುಡುಗನಿಗಿಂತ ಹುಡುಗಿಯರು ಮನರಂಜನೆ ನೀಡುವ ಹುಡುಗರನ್ನು ಇಷ್ಟಪಡ್ತಾರೆ. ಸದಾ ಜೋಕ್ ಮಾಡ್ತಾ, ನಗಿಸುತ್ತಿರುವ ಹುಡುಗರೆಂದ್ರೆ ಹುಡುಗಿಯರಿಗೆ ಇಷ್ಟ. ಸಾಮಾನ್ಯವಾಗಿ ಜೋಕ್ ಮಾಡ್ತಾ, ಮನರಂಜನೆ ನೀಡುವ ಹುಡುಗರು ಸುಂದರವಾಗಿರೋದಿಲ್ಲ.
ಹಾಗೆ ಹುಡುಗಿಯರು ಹುಡುಗರ ಮುಖ ನೋಡುವ ಬದಲು ಪರ್ಸ್ನಾಲಿಟಿ ನೋಡ್ತಾರೆ. ಪರ್ಸ್ನಾಲಿಟಿ ಚೆನ್ನಾಗಿರುವ ಹುಡುಗನ ಜೊತೆ ಮೆಚುರಿಟಿ ಹುಡುಗ ಹುಡುಗಿಯರಿಗೆ ಇಷ್ಟವಾಗ್ತಾನೆ. ಇದು ಸುಂದರ ಹುಡುಗನಾಗಿರಲಿ ಇಲ್ಲ ಸುಂದರವಿಲ್ಲದ ಹುಡುಗನಾಗಿರಲಿ. ಇದಲ್ಲದೆ ಕ್ರೀಡೆಯಲ್ಲಿರುವ ಹುಡುಗ, ಬುದ್ದಿವಂತ, ಶ್ರೀಮಂತ, ಸೆಕ್ಸಿ, ಚಾಲಾಕಿ, ಯಶಸ್ವಿ ಹಾಗೂ ಸ್ಮಾರ್ಟ್ ಮೈಂಡ್ ಹುಡುಗನ ಹಿಂದೆ ಬೀಳ್ತಾರೆ ಹುಡುಗಿಯರು.