
ಬೇಸಿಗೆ ರಜೆಯಲ್ಲಿ ಬೀಚ್ ಗಳಿಗೆ ಪ್ರವಾಸ ಹೋಗೋದು ಅತ್ಯಂತ ಸುಂದರ ಅನುಭವ. ನೀವು ಕೂಡ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಅನುಭವಿಸಲು ಪ್ಲಾನ್ ಮಾಡಿದ್ರೆ ನಿಮ್ಮ ಬೀಚ್ ಲುಕ್ ಬಗ್ಗೆ ಜಾಸ್ತಿ ಗಮನ ಕೊಡಿ.
ಯಾಕಂದ್ರೆ ಬೀಚ್ ಗಳು ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಹ ಜಾಗಗಳು. ಅಲ್ಲಿ ನಿಮ್ಮ ಫೋಟೋ ಇನ್ನಷ್ಟು ಅದ್ಭುತವಾಗಿ ಬರಬೇಕಂದ್ರೆ ಲುಕ್ ಕೂಡ ಪರ್ಫೆಕ್ಟ್ ಆಗಿರಲಿ.

ಸುಂದರ ಔಟ್ ಫಿಟ್, ಸನ್ ಗ್ಲಾಸ್, ಅದಕ್ಕೆ ಒಪ್ಪುವಂತಹ ಚಪ್ಪಲಿಗಳು ಇರಲೇಬೇಕು. ಆಗ ಮಾತ್ರ ನಿಮ್ಮ ಬೀಚ್ ಲುಕ್ ಆಕರ್ಷಕವೆನಿಸುತ್ತೆ. ಯಾವಾಗಲೂ ಪ್ರಿಂಟೆಡ್ ಡ್ರೆಸ್ ಗಳು ಬೀಚ್ ಗೆ ಒಪ್ಪುತ್ತವೆ. ಅದಕ್ಕೆ ತಕ್ಕಂತಹ ಹೇರ್ ಸ್ಟೈಲ್ ಇದ್ರೆ ಇನ್ನೂ ಚೆನ್ನ.
ಬೀಚ್ ಲುಕ್ ಪರ್ಫೆಕ್ಟ್ ಆಗ್ಬೇಕು ಅಂದ್ರೆ ಯಾವಾಗಲೂ ಧರಿಸುವ ನೆಕ್ಲೆಸ್ ಗಳನ್ನು ಬಿಟ್ಟು, ಬೀಟ್ಸ್ ಮತ್ತು ಶೆಲ್ಸ್ ನಿಂದ ಮಾಡಿರೋ ಎಕ್ಸೆಸ್ಸರೀಸ್ ಹಾಕಿಕೊಳ್ಳಿ. ಸ್ಟಾರ್ ಫಿಶ್ ನೆಕ್ ಪೀಸ್ ಕೂಡ ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತದೆ.

ಬೀಚ್ ಲುಕ್ ಗಾಗಿ ಕಾಲುಗಳ ಕಡೆಗೂ ನೀವು ಗಮನ ಹರಿಸಬೇಕು. ನೀವು ಸೆಕ್ಸಿ ಸ್ವಿಮ್ ಸೂಟ್ ತೊಟ್ಟಿದ್ದರೆ ಅದಕ್ಕೆ ಒಪ್ಪುವಂತಹ ಆ್ಯಂಕ್ಲೆಟ್ಸ್ ಕೂಡ ಹಾಕಿಕೊಳ್ಳಿ.

ಬೀಚ್ ಲುಕ್ ಗೆ ಹ್ಯಾಟ್ ಇರಲೇ ಬೇಕು. ಸ್ವಲ್ಪ ದೊಡ್ಡದಾದ ರೌಂಡ್ ಹ್ಯಾಟ್ ನಿಮಗೆ ಪರ್ಫೆಕ್ಟ್ ಆಗಿ ಕಾಣಿಸುತ್ತದೆ. ಇದು ಬಿಸಿಲಿನಿಂದ್ಲೂ ನಿಮ್ಮನ್ನು ರಕ್ಷಿಸುತ್ತದೆ.

ಬೀಚ್ ಗೆ ಹೋಗುವಾಗ ಸ್ಕಾರ್ಫ್ ಕೊಂಡೊಯ್ಯಲು ಮರೆಯಬೇಡಿ. ಸ್ವಿಮ್ ಸೂಟ್ ನಲ್ಲಿದ್ದರೆ ನೀವು ಬಿಸಿಲಿನಿಂದ ಬಚಾವಾಗಲು ಸ್ಕಾರ್ಫ್ ಅನ್ನು ಸೊಂಟಕ್ಕೆ ಸುತ್ತಿಕೊಳ್ಳಬಹುದು. ಕುತ್ತಿಗೆಗೆ ಸ್ಟೈಲಿಶ್ ಆಗಿ ಹಾಕಿಕೊಳ್ಳಬಹುದು.

ಬೀಚ್ ಗಾಗಿ ಚಪ್ಪಲಿಗಳ ಆಯ್ಕೆ ಸೂಕ್ತವಾಗಿರಲಿ. ಯಾವುದೇ ಕಾರಣಕ್ಕೂ ಹೈಹೀಲ್ಸ್ ಧರಿಸಬೇಡಿ. ಮರಳಿನಲ್ಲೂ ಕಂಫರ್ಟ್ ಆಗಿ ನಡೆಯಲು ಸಾಧ್ಯವಾಗುವಂತಹ ಚಪ್ಪಲಿಗಳನ್ನೇ ಧರಿಸಿ. ಇಷ್ಟಿದ್ರೆ ನಿಮ್ಮ ಬೀಚ್ ಲುಕ್ ಅತ್ಯದ್ಭುತವಾಗಿ ಕಾಣಿಸುತ್ತೆ.