ಉದ್ಯಮದ ಬೇಡಿಕೆಗಳನ್ನು ಪೂರೈಸಲು ಮುಂದಿನ 6 ರಿಂದ 12 ತಿಂಗಳುಗಳಲ್ಲಿ 60,000 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮೊಬೈಲ್ ತಯಾರಕ ಕಂಪನಿಗಳು ಯೋಜಿಸಿವೆ. ಪೂರೈಕೆ ಸರಪಳಿ ಸಂಸ್ಥೆಯಾದ ಟೀಮ್‌ಲೀಸ್ ಸರ್ವಿಸಸ್ ಲಿಮಿಟೆಡ್ ಪ್ರಕಾರ, ಹ್ಯಾಂಡ್‌ಸೆಟ್ ತಯಾರಿಕೆಯಲ್ಲಿ ಇದು 5,000 ಮುಕ್ತ ಸ್ಥಾನಗಳನ್ನು ಹೊಂದಿದೆ ಎಂದು ತಿಳಿಸಿದೆ.
ಭಾರತವು ಪ್ರಸ್ತುತ ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದು ಉನ್ನತ ಸ್ಮಾರ್ಟ್‌ಫೋನ್ ಒಇಎಂ ಗಳು ಮತ್ತು ಅದರ ಉತ್ಪಾದನಾ ಪಾಲುದಾರರಿಗೆ ದೇಶದಲ್ಲಿ ಸ್ಥಳೀಯ ಅಸೆಂಬ್ಲಿ ಘಟಕಗಳನ್ನು ಸ್ಥಾಪಿಸಲು ದಾರಿ ಮಾಡಿಕೊಟ್ಟಿದೆ. ದೆಹಲಿ (ಎನ್ ಸಿಆರ್), ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ನೇಮಕಾತಿ ನಡೆಯುತ್ತಿದೆ.
ಮಾರ್ಚ್ 2024ರ ವೇಳೆಗೆ ಭಾರತದಲ್ಲಿ ಫೋನ್ ಉತ್ಪಾದನಾ ಪ್ಯಾನ್‌ನಲ್ಲಿ 40,000-60,000 ನೇರ ಉದ್ಯೋಗಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಟೀಮ್‌ಲೀಸ್‌ನ ಕಾರ್ತಿಕ್ ನಾರಾಯಣ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಹೆಚ್ಚುತ್ತಿರುವ ಬೇಡಿಕೆಯ ನಡುವೆ ಮುಂದಿನ ಎರಡು ವರ್ಷಗಳಲ್ಲಿ 80,0000 ದಿಂದ 1,00,000ದವರೆಗೆ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎನ್ನಲಾಗಿದೆ.
2014-2022ರ ಅವಧಿಯಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಮೊಬೈಲ್ ಫೋನ್ ಸಾಗಣೆಗಳು 2 ಶತಕೋಟಿ ಸಂಚಿತ ಘಟಕಗಳನ್ನು ದಾಟಿದೆ. ಇದು ಶೇ.23 ರಷ್ಟು ಸಿಎಜಿಆರ್ ಅನ್ನು ನೋಂದಾಯಿಸಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ರಿಸರ್ಚ್ ಹೇಳಿದೆ. ಇದರಿಂದ ಆಂತರಿಕ ಬೇಡಿಕೆ ಹೆಚ್ಚಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಿಸುವ ದೇಶವಾಗಿದೆ.
ಭಾರತವು ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಹಳ ದೂರ ಸಾಗಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ವರ್ಷಗಳಲ್ಲಿ ಸ್ಥಳೀಯ ಉತ್ಪಾದನೆಯ ಹೆಚ್ಚಳವನ್ನು ನಾವು ನೋಡಿದ್ದೇವೆ. 2022ರಲ್ಲಿ, ಒಟ್ಟಾರೆ ಭಾರತೀಯ ಮಾರುಕಟ್ಟೆಯಲ್ಲಿ ಶೇ. 98 ಕ್ಕಿಂತ ಹೆಚ್ಚು ಸಾಗಣೆಗಳು ಮೇಡ್ ಇನ್ ಇಂಡಿಯಾ ಆಗಿದೆ. 2014 ರಲ್ಲಿ ಪ್ರಸ್ತುತ ಸರ್ಕಾರವು ಅಧಿಕಾರ ವಹಿಸಿಕೊಂಡಾಗ ಕೇವಲ ಶೇ. 19ರಷ್ಟಿತ್ತು. ಆದರೀಗ ಮೇಕ್ ಇನ್ ಇಂಡಿಯಾ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ.