ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಭಾರತದ ಮೋಸ್ಟ್ ಎಲೆಜಬಲ್ ಬ್ಯಾಚುಲರ್. ಈ ನಟನ ವಿವಾಹದ ಕುರಿತು ಹಲವಾರು ವದಂತಿಗಳು ಹರಿದಾಡುತ್ತಿದ್ದರೂ ಯಾರು ಪ್ರಭಾಸ್ ಕೈ ಹಿಡಿಯಲಿದ್ದಾರೆಂಬುದು ಇನ್ನೂ ಗುಟ್ಟಾಗಿಯೇ ಇದೆ.
‘ಬಾಹುಬಲಿ’ ಮೊದಲ ಮತ್ತು ಎರಡನೇ ಭಾಗದ ಬಳಿಕ ಪ್ರಭಾಸ್ ಮಾರ್ಕೇಟ್ ಜಾಸ್ತಿಯಾಗಿದೆ. ಪ್ರಭಾಸ್ ‘ಬಾಹುಬಲಿ’ಗಾಗಿ ಬರೋಬ್ಬರಿ 10 ಕೋಟಿ ರೂ. ಮೊತ್ತದ ಜಾಹೀರಾತು ರಿಜೆಕ್ಟ್ ಮಾಡಿದ್ದರು. 5 ವರ್ಷಗಳ ಕಾಲ ‘ಬಾಹುಬಲಿ’ ಪಾತ್ರಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಮಹೇಂದ್ರ ಬಾಹುಬಲಿ ಮತ್ತು ಅಮರೇಂದ್ರ ಬಾಹುಬಲಿಯಾಗಿ ಪ್ರಭಾಸ್ ಅಮೋಘ ಅಭಿನಯ ನೀಡಿದ್ದಾರೆ.
ಈ ಪಾತ್ರಗಳಿಗಾಗಿ ತೂಕವನ್ನು ಹೆಚ್ಚು, ಕಡಿಮೆ ಮಾಡಿಕೊಳ್ಳಲು ಅವರು ಭಾರೀ ಶ್ರಮ ಹಾಕಿದ್ದಾರೆ. ಪ್ರಭಾಸ್ ಗೆ ಸ್ಪೋರ್ಟ್ಸ್ ಅದರಲ್ಲಿಯೂ ವಾಲಿಬಾಲ್ ಇಷ್ಟವಂತೆ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಪುಸ್ತಕ ಓದುವ ಹವ್ಯಾಸವಿದೆ. ನಾಚಿಕೆ ಸ್ವಭಾವದ ಪ್ರಭಾಸ್ ಪರಿಸರ ಪ್ರೇಮಿ ಕೂಡ ಹೌದು.
ಟಾಲಿವುಡ್ ನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟು, ಮೊದಲೇ ಸೂಪರ್ ಸ್ಟಾರ್ ಆಗಿದ್ದ ಪ್ರಭಾಸ್ ‘ಬಾಹುಬಲಿ’ ನಂತರ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ಮಿಂಚಿದ್ದಾರೆ.