
ಬಸ್ ಚಾಲಕ ಜಗದೀಶ್ ನನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ, ಆಂಬುಲೆನ್ಸ್ ತಡೆದಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಜಗದೀಶ್ ನನ್ನು ಬಿಜಿಎಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಈ ಕುರಿತ ಸಿಸಿಟಿವಿ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಮಾಜಿ ಶಾಸಕ ಸುರೇಶ್ ಗೌಡ, ತಾನು ಆಂಬುಲೆನ್ಸ್ ತಡೆದಿಲ್ಲ ಎಂದು ಹೇಳುವ ಮೂಲಕ ಆರೋಪ ನಿರಾಕರಿಸಿದ್ದಾರೆ. ನಾನು ಆಂಬುಲೆನ್ಸ್ ತಡೆದಿಲ್ಲ, ಬಸ್ ಚಾಲಕನ ಆರೋಗ್ಯ ವಿಚಾರಿಸಿ ಕೂಡಲೇ ಕಳಿಸಿದ್ದೇನೆ ಎಂದಿದ್ದಾರೆ.

