HomeIndiaನಾಯಿ ಮಾಂಸ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್

ನಾಯಿ ಮಾಂಸ ನಿಷೇಧ ಆದೇಶ ರದ್ದುಗೊಳಿಸಿದ ಹೈಕೋರ್ಟ್

‘ಇಷ್ಟದ ಆಹಾರ ತಿನ್ನುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ’ ಎಂದು ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸದ ನಿಷೇಧವನ್ನು ಗೌಹಾಟಿ ಹೈಕೋರ್ಟ್ ರದ್ದುಗೊಳಿಸಿದೆ.

ಗೌಹಾಟಿ ಹೈಕೋರ್ಟ್‌ನ ಕೊಹಿಮಾ ಪೀಠವು ರಾಜ್ಯದ ಅಂಗಡಿಗಳು, ರೆಸ್ಟೋರೆಂಟ್‌ ಗಳಲ್ಲಿ ನಾಯಿ ಮಾಂಸ ಮಾರಾಟ ಮತ್ತು ತಿನಿಸು ಬಡಿಸುವುದನ್ನು ನಿಷೇಧಿಸುವ ನಾಗಾಲ್ಯಾಂಡ್ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ನಾಗಾ ಸಮುದಾಯದವರು ಸೇವಿಸುವ ನಾಯಿ ಮಾಂಸ ಮಾರಾಟವನ್ನು ನಿಷೇಧಿಸುವ ಅಧಿಸೂಚನೆಯು ಜನರು ತಮ್ಮ ಆಯ್ಕೆಯ ಆಹಾರವನ್ನು ಸೇವಿಸುವ ಸ್ವಾತಂತ್ರ್ಯ ಮತ್ತು ಜೀವನಾಧಾರದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನಾಗಾಗಳು ನಾಯಿ ಮಾಂಸವನ್ನು ಸೇವಿಸುವುದು ಸಂಸ್ಕೃತಿ, ಪದ್ಧತಿಯಾಗಿದೆ. ಅವರು ಅದನ್ನು ಔಷಧೀಯ ಗುಣಲಕ್ಷಣ ಹೊಂದಿದೆ ಎಂದು ಪರಿಗಣಿಸುತ್ತಾರೆ.

ನಾಯಿ ಮಾಂಸದ ಸೇವನೆ ನಾಗಾಗಳ ಸ್ವೀಕಾರಾರ್ಹವಾದ ರೂಢಿ. ಆಹಾರವಾಗಿ ಬಳಸುತ್ತಾರೆ. ಜನ ನಾಯಿಗಳನ್ನು ಸಾಗಿಸುವ, ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸಲು ಸಮರ್ಥರಾಗಿದ್ದಾರೆ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular