HomeIndiaಗುಂಡೇಟು ತಗುಲಿದ ಬಾಲಕನ ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ದುಷ್ಕರ್ಮಿಗಳಿಂದ ಬೆಂಕಿ: ಮೂವರ ಸಾವು

ಗುಂಡೇಟು ತಗುಲಿದ ಬಾಲಕನ ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ದುಷ್ಕರ್ಮಿಗಳಿಂದ ಬೆಂಕಿ: ಮೂವರ ಸಾವು

ಹಿಂಸಾಚಾರ ಪೀಡಿತ ಮಣಿಪುರದ ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಮೂವರಿದ್ದ ಆಂಬ್ಯುಲೆನ್ಸ್‌ ಗೆ ಗುಂಪೊಂದು ಬೆಂಕಿ ಹಚ್ಚಿದ್ದು, 8 ವರ್ಷದ ಬಾಲಕ, ಆತನ ತಾಯಿ ಮತ್ತು ಇನ್ನೊಬ್ಬ ಸಂಬಂಧಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಂಜೆ ಐರೋಸೆಂಬಾದಲ್ಲಿ ಘಟನೆ ಸಂಭವಿಸಿದ್ದು, ಶೂಟೌಟ್‌ ನಲ್ಲಿ ಬಾಲಕನ ತಲೆಗೆ ಗುಂಡು ತಗುಲಿದ ನಂತರ ಆತನ ತಾಯಿ ಮತ್ತು ಅವರ ಸಂಬಂಧಿ ಇಂಫಾಲ್‌ ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಗುಂಪೊಂದು ಬೆಂಕಿ ಹಚ್ಚಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರನ್ನು ಟಾನ್ಸಿಂಗ್ ಹ್ಯಾಂಗ್ಸಿಂಗ್(8), ಆತನ ತಾಯಿ ಮೀನಾ ಹ್ಯಾಂಗ್ಸಿಂಗ್(45) ಮತ್ತು ಸಂಬಂಧಿ ಲಿಡಿಯಾ ಲೌರೆಂಬಾಮ್(37) ಎಂದು ಗುರುತಿಸಲಾಗಿದೆ.

ಬುಡಕಟ್ಟು ಸಮುದಾಯದ ತೋನ್ಸಿಂಗ್ ಮತ್ತು ಅವನ ತಾಯಿ ಕಾಂಗ್‌ ಚುಪ್‌ ನಲ್ಲಿರುವ ಅಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿ ತಂಗಿದ್ದರು. ಜೂನ್ 4 ರಂದು ಸಂಜೆ ಶಿಬಿರದ ಪ್ರದೇಶದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಗಿ ಶಿಬಿರದಲ್ಲಿದ್ದ ಬಾಲಕನಿಗೆ ಗುಂಡು ತಗುಲಿತ್ತು.

ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು ತಕ್ಷಣವೇ ಇಂಫಾಲ್‌ ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಐಸೊಸೆಂಬಾದಲ್ಲಿ ಆಂಬ್ಯುಲೆನ್ಸ್ ಸಂಚರಿಸುವಾಗ ಜನರ ಗುಂಪು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ವಾಹನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular