HomeEntertainmentBIG NEWS: ಜೀವ ಬೆದರಿಕೆ ಹಿನ್ನೆಲೆ; ಸಲ್ಮಾನ್ ನಿವಾಸದ ಭದ್ರತೆ ಹೆಚ್ಚಿಸಿದ ಪೊಲೀಸರು

BIG NEWS: ಜೀವ ಬೆದರಿಕೆ ಹಿನ್ನೆಲೆ; ಸಲ್ಮಾನ್ ನಿವಾಸದ ಭದ್ರತೆ ಹೆಚ್ಚಿಸಿದ ಪೊಲೀಸರು

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಈ ಹಿಂದೆ ಬೆದರಿಕೆ ಪತ್ರ ಬಂದಿದ್ದು, ಹೀಗಾಗಿ ಸಲ್ಮಾನ್ ಖಾನ್ ಅವರಿಗೆ ವೈಯಕ್ತಿಕ ಭದ್ರತೆ ನೀಡಿರುವ ಜೊತೆಗೆ ಮುಂಬೈನ ಗೆಲಾಕ್ಸಿ ಅಪಾರ್ಟ್ಮೆಂಟ್ ನಲ್ಲಿರುವ ನಿವಾಸಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಐಷಾರಾಮಿ ಬುಲೆಟ್ ಪ್ರೂಫ್ ಕಾರನ್ನು ಖರೀದಿಸಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಈ ಮೊದಲು ಸಲ್ಮಾನ್ ಖಾನ್ ಆರೋಪಿಯಾಗಿದ್ದು, ಆಗಿನಿಂದಲೂ ಬಿಷ್ಣೋಯಿ ತಂಡದವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular