HomeIndiaಭಾರತದಲ್ಲಿ ಚುನಾವಣೆ ಆಯೋಗದ ವಿರುದ್ಧ Kharge ವಾಗ್ದಾಳಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ರನ್ನು...

ಭಾರತದಲ್ಲಿ ಚುನಾವಣೆ ಆಯೋಗದ ವಿರುದ್ಧ Kharge ವಾಗ್ದಾಳಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ರನ್ನು ವಜಾಗೊಳಿಸಿ, SIR ಪ್ರಕ್ರಿಯೆ ರದ್ದುಗೊಳಿಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ನವದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಿಇಸಿ ಜ್ಞಾನೇಂದ್ರ ಕುಮಾರ್ ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ (ಎಸ್ ಐಆರ್)ಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ ಪ್ರಸ್ತಾಪಿಸಿದ ಖರ್ಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯ ಬಗ್ಗೆ ಇತರೆ ಇಬ್ಬರು ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್​ಬೀರ್ ಸಿಂಗ್ ಸಂಧು ಅವರೇ ಆಕ್ಷೇಪ ವ್ಯಕ್ತಪಡಿಸಿರುವುದು ಮಾಧ್ಯಮ ವರದಿಗಳಿಂದ ಬಹಿರಂಗವಾಗಿದೆ ಎಂದರು.

ತಮ್ಮ ಸ್ವಂತ ಸಹೋದ್ಯೋಗಿಗಳಿಗೇ ಅವರ ಮೇಲೆ ವಿಶ್ವಾಸವಿಲ್ಲ. ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಸಿಇಸಿ ನಿರಂಕುಶವಾಗಿ ವರ್ತಿಸುತ್ತಿದ್ದು, ಅವರಿಗೆ ಆ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಮತದಾರರ ಪಟ್ಟಿಯಲ್ಲಿ ಮಾಡಲಾದ ಎಲ್ಲಾ ತಿದ್ದುಪಡಿಗಳು, ಸೇರ್ಪಡೆ ಹಾಗೂ ಹೆಸರು ತೆಗೆದುಹಾಕಿರುವ ಸಂಪೂರ್ಣ ದತ್ತಾಂಶವನ್ನು ತಕ್ಷಣವೇ ಸಾರ್ವಜನಿಕವಾಗಿ ಪ್ರಕಟಿಸಬೇಕು.

ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕಳೆದುಕೊಂಡಿರುವ ಅರ್ಹ ಮತದಾರರಿಗೆ ಮರುಪರಿಶೀಲನೆ ಕೋರಿ ಮೇಲ್ಮನವಿ ಸಲ್ಲಿಸಲು ಸೂಕ್ತ ಕಾಲಾವಕಾಶ ಕಲ್ಪಿಸಬೇಕು.

ಎಲ್ಲಾ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯನ್ನು ಸರಳ ಹಾಗೂ ಬಳಸಲು ಸುಲಭವಾದ ಡಿಜಿಟಲ್ ಸ್ವರೂಪದಲ್ಲಿ ಕಾಲಮಿತಿಯೊಳಗೆ ಒದಗಿಸಬೇಕು.

ಮತದಾರರ ಪಟ್ಟಿಯ ತಿರುಚುವಿಕೆ ಮತ್ತು ಅಕ್ರಮಗಳ ಆರೋಪಗಳ ಕುರಿತು ಸ್ವತಂತ್ರ ಸಂಸ್ಥೆಯಿಂದ ನಿಗದಿತ ಅವಧಿಯೊಳಗೆ ತನಿಖೆ ನಡೆಸಬೇಕು.

ಯಾವುದೇ ಮಾಹಿತಿ ಮುಚ್ಚಿಡಲಾಗುತ್ತಿದೆ ಎಂಬ ಅನುಮಾನ ಮೂಡದಂತೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು.

ಫಾರ್ಮ್-6 (ಹೊಸ ಮತದಾರರ ನೋಂದಣಿ) ನಿಯಮಗಳಲ್ಲಿ ಇತ್ತೀಚೆಗೆ ತರಲಾದ ಬದಲಾವಣೆಗಳು ಯುವ ಮತದಾರರನ್ನು ಹಕ್ಕಿನಿಂದ ವಂಚಿತಗೊಳಿಸುವಂತಿವೆ ಎಂದು ಆರೋಪಿಸಿದ ಖರ್ಗೆ, ಈ ವಿಷಯವನ್ನು ಧೈರ್ಯವಾಗಿ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಲುವನ್ನು ಶ್ಲಾಘಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular