HomeKarnatakaಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ.ಕೆ: ದಾಖಲೆ ಹಾಗೂ ಆಡಿಯೋ ...

ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ.ಕೆ: ದಾಖಲೆ ಹಾಗೂ ಆಡಿಯೋ ಬಿಡುಗಡೆ

ಬೆಂಗಳೂರು: ಅಮೇರಿಕಾದಿಂದ ವಾಪಾಸ್ ಆದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತ ಸುದ್ದಿ ಹೇಳುತ್ತೇನೆ. ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್ ಹ್.ಡಿ.ಕುಮಾರಸ್ವಾಮಿ ಕೊನೆಗೂ ಅಲ್ಲೋಲ-ಕಲ್ಲೋಲ ಸುದ್ದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಹಲವು ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

ಬಿಎಂ ಐ ಸಿ ಯೋಜನೆಗೆಂದು ಪಡೆದಿದ್ದ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿ ವಿಚಾರವಾಗಿಯೂ ​ಬಾಂಬ್​​ ಸಿಡಿಸಿದ್ದಾರೆ. 2003ರಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ. ಇದಕ್ಕೆ ಕಾರಣ ಒಡಿಪಿ ಬದಲಾವಣೆ ಮಾಡಿದ್ದು ಎಂದು ದೂರಿರುವ ಅವರು, 2003ರಿಂದ 2023ರವರೆಗಿನ ದಾಖಲೆಯನ್ನೂ ಮುಂದಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಕೆ.ಶಿವಕುಮಾರ್​​ ಕುಟುಂಬದವರ ಹೆಸರಿನಲ್ಲಿ ನೈಸ್ ಯೋಜನೆ ವ್ಯಾಪ್ತಿಗೆ ಬರುವ ಜಮೀನು ಖರೀದಿ ಮಾಡಲಾಗಿದೆ.ಜಮೀನು ಖರೀದಿಸಿರುವ ದಾಖಲೆ ಪತ್ರವನ್ನೂ ಬಿಡುಗಡೆ ಮಾಡಿದ್ದಾರೆ. ನಾನು ಟೇಕ್​ಓವರ್ ಮಾಡಲು ಯತ್ನಿಸ್ತಿಲ್ಲ ಅಂತಾರೆ, ಆದರೆ ಇದಕ್ಕೆ ಏನು ಹೇಳ್ತೀರಾ ಎಂದು ಡಿಕೆಶಿ ಅವರನ್ನು ಪ್ರಶ್ನಿಸಿದ್ದಾರೆ.

2004ರ ನ.3ರಂದು ಸರ್ಕಾರದ ಆಸ್ತಿಯನ್ನು ಡಿ.ಕೆ.ಸುರೇಶ್ ಖರೀದಿಸಿದ್ರು. ಯಾರದ್ದೋ ಹೆಸರಿನಲ್ಲಿದೆ ಎಂದು ಸುಮಾರು 10 ಎಕರೆ ಭೂಮಿ ಖರೀದಿ ನಡೆದಿದ್ದು, ಅದು ಸರ್ಕಾರದ ಯೋಜನೆಗೆ 1997ರಲ್ಲಿ ನೋಟಿಫೈ ಆಗಿದ್ದ ಭೂಮಿಯಾಗಿದೆ. ಅದನ್ನು 2026ರಲ್ಲಿ ಸಿಎಂ ಡಿಕೆ ಪುತ್ರಿ ಆಭರಣ ಖರೀದಿ ಮಾಡುತ್ತಾರೆ ಎಂದು ಹೆಚ್​​ಡಿಕೆ ಹೇಳಿದ್ದಾರೆ.

ಅಧಿಕಾರಿಗಳಿಗೆ ಹೆದರಿಸಿ ಗೋಮಾಳವನ್ನೂ ಬರೆಸಿಕೊಂಡಿದ್ದು, 150-200 ಎಕರೆಗೂ ಹೆಚ್ಚು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಅವೆಲ್ಲವೂ ನೈಸ್ ಕಂಪನಿಯ ವ್ಯಾಪ್ತಿಯ ಭೂಮಿ. ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಈಗ ಇವರ ಹೆಸರಿನಲ್ಲಿದೆ. ನಾನು ಬ್ಲ್ಯಾಕ್​ಮೇಲ್​ ಮಾಡ್ತಿದ್ದೇನೆಂದು ಡಿಕೆಶಿ ಹೇಳುತ್ತಾರೆ. ಡಿಕೆಶಿ ಅವರೇ ನಾನು ಬ್ಲ್ಯಾಕ್​ಮೇಲ್ ಮಾಡ್ತಿರುವುದು ನಿಜ. ಆದರೆ ಅಕ್ರಮವಾಗಿ ಭೂಮಿ ಖರೀದಿಸಿದ್ದೀರಲ್ಲ, ಅದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಬಿಎಂಐಸಿ ಯೋಜನೆಗೆಂದು ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿ ತೆಗೆದುಕೊಂಡಿದ್ದರು. ಆದರೆ ರಸ್ತೆಗೆ 1 ಎಕರೆ ಹೋಗಿದೆ, ಉಳಿದ ಭೂಮಿ ಕೊಡಿ ಎಂದು ಶ್ರೀಗಳು ಅರ್ಜಿ ಕೊಡ್ತಾರೆ. ಈ ವಿಚಾರಕ್ಕೆ ನನ್ನ ಮನೆಗೆ ಬರಬೇಡಿ. ಆಶೀರ್ವಾದ ಮಾಡೋಕೆ ಮಾತ್ರ ಬನ್ನಿ ಎಂದು ಸಿದ್ಧಗಂಗಾ ಸ್ವಾಮೀಜಿಗೆ ಹೇಳ್ತಾರೆ ಎನ್ನುತ್ತಾ ಸಿಎಂ ಡಿಕೆಶಿ ಮಾತನಾಡಿದ್ದು ಎನ್ನಲಾದ ಆಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular