ಬೆಳಿಗ್ಗೆ ಎದ್ದ ತಕ್ಷಣ ಶೌಚಾಲಯಕ್ಕೆ ಹೋಗುವ ಅಭ್ಯಾಸ ಅನೇಕರಿಗಿರುತ್ತದೆ. ಇದು ಒಳ್ಳೆಯದೆ. ಆದ್ರೆ ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಳ್ಳುವವರೂ ಇದ್ದಾರೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸ್ವಚ್ಛವಾಗಿರುವ ಶೌಚಾಲಯದಲ್ಲಿಯೂ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿರುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ಸಮಯ ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವುದರಿಂದ ಮೂತ್ರದ ಸೋಂಕು ಕಾಣಿಸಿಕೊಳ್ಳುತ್ತದೆ. ಕಾರಣವಿಲ್ಲದೆ ಟಾಯ್ಲೆಟ್ ಸೀಟ್ ನಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ.
ಕೆಲವರು ಟಾಯ್ಲೆಟ್ ನಲ್ಲಿ ಕುಳಿತು ಪೇಪರ್, ಪತ್ರಿಕೆ ಓದುತ್ತಾರೆ. ಈ ಹವ್ಯಾಸ ನಿಮಗೂ ಇದ್ದರೆ ಇಂದೇ ಬಿಟ್ಟುಬಿಡಿ. ಯಾಕ್ರೆಂದ್ರೆ ಪೇಪರ್ ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾ ನಿಮಗೊಂದೇ ಅಲ್ಲ ನಿಮ್ಮ ಕುಟುಂಬಸ್ಥರ ಅನಾರೋಗ್ಯಕ್ಕೂ ಕಾರಣವಾಗುತ್ತದೆ.
ಟಾಯ್ಲೆಟ್ ಗೆ ಮರೆತೂ ಮೊಬೈಲ್ ತೆಗೆದುಕೊಂಡು ಹೋಗಬೇಡಿ. ಮೊಬೈಲ್ ಗೆ ಅಂಟಿಕೊಳ್ಳುವ ಬ್ಯಾಕ್ಟೀರಿಯಾ ಕಿವಿ ಹಾಗೂ ಬಾಯಿ ಸೋಂಕಿಗೆ ಕಾರಣವಾಗುತ್ತದೆ.
ಶೌಚಾಲಯದಲ್ಲಿ ಕುಳಿತು ಯೋಚನೆ ಮಾಡುವವರೂ ಇದ್ದಾರೆ. ಇದು ಕಿಳರಿಮೆಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.