HomeKarnatakaBIG NEWS: ಮಾಡಬಾರದ ಕೆಲಸ ಮಾಡಿ ಸ್ಟೇ ತಂದಿದ್ದಾರೆ; ರಮೇಶ್ ಜಾರಕಿಹೊಳಿಗೂ ತಿರುಗೇಟು ನೀಡಿದ MLC...

BIG NEWS: ಮಾಡಬಾರದ ಕೆಲಸ ಮಾಡಿ ಸ್ಟೇ ತಂದಿದ್ದಾರೆ; ರಮೇಶ್ ಜಾರಕಿಹೊಳಿಗೂ ತಿರುಗೇಟು ನೀಡಿದ MLC ರವಿ

ಬೆಂಗಳೂರು: ಬಾಂಬೆ ಬ್ಲ್ಯೂ ಬಾಯ್ಸ್ ಯಾಕೆ ಸ್ಟೇ ತಂದರು ? ಮಾಡಬಾರದ ಕೆಲಸ ಮಾಡಿ ಸ್ಟೇ ತಂದಿದ್ದಾರೆ ಎಂದು ಬಿಜೆಪಿ ಶಾಸಕರ ವಿರುದ್ಧ ಎಂ ಎಲ್ ಸಿ ರವಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಇಡಿಸಿಕೊಳ್ಳುವಂತ ಕೆಲಸ ಯಾಕೆ ಮಾಡಬೇಕಿತ್ತು. ಬಾಂಬೆ ಬ್ಲ್ಯೂ ಬಾಯ್ಸ್ ಯಾಕೆ ಸ್ಟೇ ತಂದರು ? ಅಂತಹ ಕೆಲಸ ಮಾಡಿದ್ದಕ್ಕೆ ಸ್ಟೇ ತಂದಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಟೀಕಿಸಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ಅಧ್ಯಾಯ ಬಿಜೆಪಿಯಲ್ಲಿ ಕ್ಲೋಸ್ ಆಗಿದೆ. ಚುನಾವಣೆ ಮುಗಿದ ಬಳಿಕ ರಮೇಶ್ ಜಾರಕಿಹೊಳಿ ಅಧ್ಯಾಯವೂ ಮುಗಿಯಲಿದೆ. ಚಾಕಲೋಟ್ ಗಾಗಿ ಮಕ್ಕಳು ಕಿರುಚುವಂತೆ ಕಿರುಚುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಮೇಶ್ ಜಾರಕಿಹೊಳಿಗೆ ತಾಕತ್ತಿದ್ದರೆ ಕನಕಪುರದಿಂದ ಸ್ಪರ್ಧಿಸಲಿ. ಬೆಳಗಾವಿಯಿಂದ ಒಳ್ಳೆ ರಸ್ತೆಯಿದೆ, ಒಳ್ಳೆ ಕಾರು ಇದೆ. ಪಕ್ಷದಿಂದ ಅರ್ಜಿ ಹಾಕಿ ನಿಲ್ಲಲಿ ಎಂದು ಸವಾಲು ಹಾಕಿದರು.

For Latest News Updates, Join Our Whatsapp Community🚩
RELATED ARTICLES

Most Popular